ವಿದ್ಯಾರ್ಥಿಗಳಲ್ಲಿ ಸಾಹಿತ್ತ್ಯಾಸಕ್ತಿ ಮುಖ್ಯ

Interest in literature is important among students.
Interest in literature is important among students.
Published on

ಗುಳೇದಗುಡ್ಡ: ವಿದ್ಯಾರ್ಥಿ ದಿಸೆಯಲ್ಲಿಯೇ ಉತ್ತಮ ಕವನ ರಚಿಸಿ ‘ಮಮತೆಯ ಮಡಿಲು’ ಸಂಕಲನ ಪ್ರಕಟಿಸಿ ಸಾಹಿತ್ಯ ಕ್ಷೇತ್ರಕ್ಕೆ ಅರ್ಪಿಸಿರುವುದು ಶ್ಲಾಘನೀಯ ಎಂದು ಕಾಲೇಜು ಪ್ರಾಚಾರ್ಯ ಡಾ. ಎನ್.ವೈ. ಬಡನ್ನವರ ಹೇಳಿದರು.

ಪಟ್ಟಣದ ಭಂಡಾರಿ ಮತ್ತು ರಾಠಿ ಪದವಿ ಮಹಾವಿದ್ಯಾಲಯದ ಕಲಾ ವೇದಿಕೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಮಲಾಕ್ಷಿ ಅಳಗುಂಡಿ ಅವರ ಚೊಚ್ಚಲ ಕವನ ಸಂಕಲನ ‘ಮಮತೆಯ ಮಡಿಲು’ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಹಾವಿದ್ಯಾಲಯದ ಪ್ರತಿಭೆ ಕಮಲಾಕ್ಷಿ ವಿದ್ಯಾರ್ಥಿ ದೆಸೆಯಲ್ಲಿಯೇ ಅದ್ಭುತ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಲ್ಲಿ ಸಾಹಿತ್ತ್ಯಾಸಕ್ತಿ ಬೆಳೆಸುವುದು ಮುಖ್ಯ ಎಂದರು.

ಪ್ರೊ. ಪಿ.ಬಿ. ಕಣವಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುವ ವಿದ್ಯಾರ್ಥಿಗಳಿಗೆ ಆರ್ಥಿಕ ಧನಸಹಾಯ ಮಾಡುವ ಭರವಸೆ ನೀಡಿದರು.

ಸಾಹಿತಿ ಡಾ. ಸಣ್ಣವೀರಣ್ಣ ದೊಡ್ಡಮನಿ ಕವನ ಸಂಕಲನ ಕುರಿತು ಮಾತನಾಡಿ, ಸಿಂಪಿ ಲಿಂಗಣ್ಣ ಅವರ ಕವಿತೆ ‘ಈ ಆಟ ಸಾಕು’ ಎಂಬ ಕವಿತೆ ಪಾಠ ಮಾಡಿದ್ದೆ. ಅದಾದ ಮರುದಿನ ಸಾಹಿತ್ಯ ಆಸಕ್ತ ವಿದ್ಯಾರ್ಥಿನಿ ‘ಜಾತಿ ಆಟ ಸಾಕು’ ಎಂದ ಕವನ ಬರೆದು ತನ್ನ ವಿವೇಕದ ಪ್ರತಿಭೆ ತೋರಿಸಿದ್ದಳು. ಈಗ ಕವನ ಸಂಕಲ ರೂಪಿಸಿ ಕಾಲೇಜಿನ ಕಾವ್ಯ ಕೋಗಿಲೆಯಾಗಿದ್ದಾಳೆ ಎಂದರು.

ಡಾ. ಎಂ.ಎಸ್. ಪಾಟೀಲ, ಪ್ರೊ. ಮೂಕಪ್ಪ ಚನ್ನದಾಸರ, ಅಂಜಲಿ ಮುಂಡಾಸೇದ, ಡಾ. ಮಂಜಣ್ಣ, ಡಾ. ಚಿದಾನಂದ ನಂದಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net