ಶೇ. 30ರಷ್ಟು ಬಡ್ಡಿ ಕೊಡುವುದಾಗಿ ಹೇಳಿ 7.34 ಲಕ್ಷ ರೂ. ವಂಚನೆ

Crime Logo
Published on

ಹಾನಗಲ್ಲ: 1 ಲಕ್ಷ ರೂ.ಗೆ ತಿಂಗಳಿಗೆ ಶೇ. 30ರಷ್ಟು ಬಡ್ಡಿ ಕೊಡುತ್ತೇವೆ ಎಂದು ಹೇಳಿ ವ್ಯಕ್ತಿಯೊಬ್ಬನಿಗೆ 7.34 ಲಕ್ಷ ರೂ. ಮೋಸ ಮಾಡಿದ ಘಟನೆ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.
ಪಟ್ಟಣದ ರಾಜು ನಗರದ ನಿವಾಸಿ ಅಬ್ದುಲ್ಲಾ ಅಲ್ಲಾವುದೀನ ನಾರಾಯಣಪುರ (24) ಮೋಸ ಹೋದವರು.
ಇವರಿಗೆ ಎಫ್‌ಟಿಕ್ಸ್ ಟ್ರೇಡಿಂಗ್ ಕಂಪನಿ ಹಾಗೂ ಬೇಸ್ಟ್ ಆಫ್ ಸ್ಟಾಕ್ ಅಡ್ವೈಜರ್ ಹೆಸರಿನ ಕಂಪನಿಯವರು 1 ಲಕ್ಷ ರೂ.ಗೆ ತಿಂಗಳಿಗೆ 30ರಷ್ಟು ಬಡ್ಡಿ ಕೊಡುತ್ತೇವೆ ಎಂದು ನಂಬಿಸಿ ಇವರಿಂದ 7.34 ಲಕ್ಷ ರೂ. ಹಾಕಿಸಿಕೊಂಡು ಬಡ್ಡಿ ನೀಡದೆ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net