ಅಂತರ ಕಾಲೇಜು ಕ್ರೀಡಾಕೂಟ

sports
Published on

2023-24ನೇ ಸಾಲಿನ ರಾಷ್ಟ್ರೀಯ ಕ್ರೀಡಾ ದಿನ (ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರ ಜನ್ಮ ದಿನಾಚರಣೆ) ಅಂಗವಾಗಿ ಮೈಸೂರು ನಗರ ಪುರುಷ ಮತ್ತು ಮಹಿಳೆಯರ ಅಂತರ ಕಾಲೇಜುಗಳ ಕ್ರೀಡಾಕೂಟ ಹಾಕಿ (ಪೆನಾಲ್ಟಿ ಶೂಟ್ ಔಟ್) ಬ್ಯಾಸ್ಕೆಟ್ ಬಾಲ್ ಹಾಗೂ ಟಗ್ ಆಫ್ ವಾರ್ ಕ್ರೀಡಾಕೂಟಗಳನ್ನು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಗಸ್ಟ್ 29 ರಂದು ಹಮ್ಮಿಕೊಳ್ಳಲಾಗಿದೆ.


ಆಸಕ್ತ ಕಾಲೇಜಿನ ಕ್ರೀಡಾಪಟುಗಳು ಕಾಲೇಜಿನ ದೃಢೀಕರಣದೊಂದಿಗೆ ಪಾಲ್ಗೊಳ್ಳಬಹುದು. ಆಗಸ್ಟ್ 29 ರಂದು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬೆಳಗ್ಗೆ 9:30ಕ್ಕೆ ವರದಿ ಮಾಡಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸುವುದು.

ಹೆಚ್ಚಿನ ಮಾಹಿತಿಗಾಗಿ ಹಾಕಿ ತಂಡದ ತರಬೇತುದಾರರಾದ ಸುಂದರೇಶ್ ಮೊ:9844487796 ಬ್ಯಾಸ್ಕೆಟ್ ಬಾಲ್ ತರಬೇತುದಾರರಾದ ಗಿರೀಶ್ ಬಿ.ಎಸ್ ಮೊ:9964411709 ಮತ್ತು ಅಥ್ಲೆಟಿಕ್ ತರಬೇತುದಾರರಾದ ರಾಮಸ್ವಾಮಿ ಮೊ:9449300330 ಇವರನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net