

ರಿಪ್ಪನ್‌ಪೇಟೆ: ಪ್ರಯಾಣಿಕರ ಬಹುದಿನದ ಬೇಡಿಕೆಯಾಗಿದ್ದ ಅರಸಾಳಿನಲ್ಲಿ ಇಂಟರ್ ಸಿಟಿ ರೈಲಿನ ನಿಲುಗಡೆಯು ಗುರುವಾರದಿಂದ ಆರಂಭವಾಗಿದ್ದು ಬೆಳಿಗ್ಗೆ ಮೈಸೂರು-ತಾಳಗುಪ್ಪ ಇಂಟರ್ ಸಿಟಿ ರೈಲು ಆಗಮಿಸುತ್ತಿದ್ದಂತೆ ಸಾರ್ವಜನಿಕರು ಸಂತೋಷದಿಂದ ಸ್ವಾಗತಿಸಿದರು. ಗ್ರಾಪಂ ಅಧ್ಯಕ್ಷೆ ಜಯಮ್ಮ ನಾಗಪ್ಪ ಪೂಜೆ ಸಲ್ಲಿಸಿದರು. ಸಂಸದರು ಹಾಗೂ ಕೇಂದ್ರ ಸರ್ಕಾರದ ಪರ ಸಾರ್ವಜನಿಕರು ಘೋಷಣೆ ಕೂಗಿ ಹರ್ಷೋದ್ಘಾರ ಮೊಳಗಿಸಿ, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಬೆಳಗೋಡು ಗಣಪತಿ ಮಾತನಾಡಿ, ಈ ಭಾಗದ ಜನರ ಬಹುದಿನದ ಬೇಡಿಕೆಯನ್ನು ಸಂಸದ ಬಿ.ವೈ. ರಾಘವೇಂದ್ರ ಅವರು ವಿಶೇಷ ಆಸಕ್ತಿಯಿಂದ ರೈಲ್ವೆ ಇಲಾಖೆಯೊಂದಿಗೆ ಚರ್ಚಿಸಿ ನಿಲುಗಡೆಗೆ ಅವಕಾಶ ಕಲ್ಪಿಸಿದ್ದಾರೆ. ಆದ್ದರಿಂದ ಸಾರ್ವಜನಿಕರ ರೈಲಿನಲ್ಲಿಯೇ ಸಂಚಾರ ಮಾಡುವ ಮೂಲಕ ಆರ್ಥಿಕ ವೆಚ್ಚ ಸಮಯವನ್ನು ಉಳಿಸಿಕೊಂಡು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ತಾಪಂ ಮಾಜಿ ಅಧ್ಯಕ್ಷ ಆಲುವಳ್ಳಿ ವೀರೇಶ ಮಾತನಾಡಿ, ರೈಲು ನಿಲುಗಡೆ ಪ್ರಾಯೋಗಿಕವಾಗಿದ್ದರೂ ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ನಿಲುಗಡೆ ಮಾಡುವಂತೆ ಬಿ.ವೈ.ರಾಘವೇಂದ್ರ ಕಾರ್ಯನಿರ್ವಹಿಸಲಿದ್ದಾರೆ. ಆನ್‌ಲೈನ್ ಬುಕ್ಕಿಂಗ್‌ನಲ್ಲಿ ಅರಸಾಳು ರೈಲು ನಿಲ್ದಾಣವನ್ನು ಸೇರಿಸಲಾಗಿದೆ. ಇಲ್ಲಿಂದಲೇ ಪ್ರಯಾಣಿಕರು ಮುಂಗಡ ಟಿಕೆಟ್ ಖಾತರಿ ಹಾಗೂ ಸಂಚರಿಸಲು ಅವಕಾಶ ನೀಡಲಾಗಿದೆ ಎಂದರು.
ಮುಖಂಡರಾದ ಬೆಳ್ಳೂರು ತಿಮ್ಮಪ್ಪ, ಆರ್.ಟಿ.ಗೋಪಾಲ್, ಎಂ.ಬಿ.ಮಂಜುನಾಥ್, ಸುಧೀಂದ್ರ ಪೂಜಾರಿ, ಉಂಡಗೆೋಡು ನಾಗಪ್ಪ, ಅರುಣ್, ನಾಗಾರ್ಜುನಸ್ವಾಮಿ, ಯೋಗೇಂದ್ರ ಗೌಡ, ಕೇತಾರ್ಜಿ ರಾವ್, ಆನಂದ ಮೆಣಸೆ, ನಾಗೇಂದ್ರ ಕಲ್ಲೂರು, ಕೆರೆಹಳ್ಳಿ ಸುಂದರೇಶ್, ಕೃಷ್ಣೋಜಿ ರಾವ್, ರಾಮಚಂದ್ರ, ಪದ್ಮಾ ಸುರೇಶ, ಶ್ವೇತಾ, ಕಗ್ಗಲಿ ಲಿಂಗಪ್ಪ, ರಾಮಚಂದ್ರ, ಮಲ್ಲಿಕಾರ್ಜುನ, ಆದರ್ಶ ಕಲ್ಲೂರು, ಕಡೆಗದ್ದೆ ಉಮೇಶ, ರಾಜೇಶ್ ಜೈನ್, ಗೋನ್ಸಾಲೀಸಾ, ಸುಧೀರಾ, ನಾಗೇಂದ್ರ ಇತರರಿದ್ದರು.