29ರಂದು ಸಂವಾದನಾತ್ಮಕ ಅಧಿವೇಶನ

Strength
Published on

ಮೈಸೂರು: ಸಿವಿಲ್ ಇಂಜಿನಿಯರ್ಸ್‌ ಒಕ್ಕೂಟದ ವತಿಯಿಂದ ‘ವೃತ್ತಿಪರ ಸಿವಿಲ್ ಇಂಜಿನಿಯರ್‌ಗಳ ಕಾಯ್ದೆ’ ಕುರಿತು ಜ.29ರಂದು ಬೆಳಗ್ಗೆ 10 ಗಂಟೆಗೆ ವಿಶ್ವೇಶ್ವರನಗರದ ಎಂಬಿಸಿಟಿ ಸಭಾಂಗಣದಲ್ಲಿ ‘ಸಂವಾದನಾತ್ಮಕ ಅಧಿವೇಶನ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಒಕ್ಕೂಟದ ಮೈಸೂರು ಶಾಖೆಯ ಅಧ್ಯಕ್ಷ ಡಾ.ಎಸ್.ರವಿರಾಜ್ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖಂಡರಾದ ಸಿ.ಸತ್ಯನಾರಾಯಣ, ಎಂ.ಮಹೇಶ್‌ಬಾಬು ಭಾಗವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುಮಾರು 300 ಸರ್ಕಾರಿ ಹಾಗೂ ಖಾಸಗಿ ಸಿವಿಲ್ ಇಂಜಿನಿಯರ್‌ಗಳು ಪಾಲ್ಗೊಳ್ಳಲಿದ್ದಾರೆ. ವೈದ್ಯರು, ನರ್ಸ್‌ಗಳಂತೆ ಸಿವಿಲ್ ಇಂಜಿನಿಯರಿಂಗ್ ಅನ್ನು ವೃತ್ತಿಯನ್ನಾಗಿ ಪರಿಗಣಿಸಬೇಕು. ಗುತ್ತಿಗೆದಾರರೇ ಹಲವಾರು ಕಾಮಗಾರಿ ಕೈಗೊಳ್ಳುವ ಕಾರಣ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವೃತ್ತಿಪರ ಸಿವಿಲ್ ಇಂಜಿನಿಯರ್‌ಗಳ ಕಾಯ್ದೆ ಕರಡನ್ನು ಅಂಗೀಕರಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಡಾ.ಜಿ.ಎಸ್.ಸುರೇಶ್, ಡಾ.ಜಿ.ಪಿ.ಚಂದ್ರಧರ್, ಎಚ್.ಎಸ್.ದೀಪಕ್, ಬಸವರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net