‘ಭಾರತ-ಓಮನ್: ವಿಜ್ಞಾನ ತಂತ್ರಜ್ಞಾನ ಮತ್ತು ಸಾಗರೋತ್ತರ ಸಂಬಂಧಗಳ ಬಲವರ್ಧನೆ’ ಕುರಿತು ವಿದ್ಯಾರ್ಥಿಗಳೊಂದಿಗಿನ ಸಂವಾದ

7
Published on

ಮೈಸೂರು: ಜನರಿಗೆ ಸುಸ್ಥಿರ ಅಭಿವೃದ್ಧಿ, ಆಹಾರ, ವಸತಿ ಮತ್ತು ಶಾಂತಿಯ ಮಹತ್ವವನ್ನು ಅರಿಯುವಂತೆ ಮಾಡುವುದೇ ಶಿಕ್ಷಣದ ಕೆಲಸ.ಯಾವ ರೀತಿಯ ಶಿಕ್ಷಣ ನೀಡುತ್ತೇವೆ ಎನ್ನುವುದರ ಮೇಲೆ ದೇಶದ ಅಭಿವೃದ್ಧಿ ಮತ್ತು ಅವನತಿ ನಿರ್ಧಾರವಾಗುತ್ತದೆ ಎಂದು ಓಮನ್ ದೇಶದ ಮಸ್ಕತ್‌ನ ವಿಜ್ಞಾನ ಮತ್ತು ತಂತ್ರಜ್ಞಾನ ರಾಷ್ಟ್ರೀಯ ವಿಶ್ವವಿದ್ಯಾಲಯದ ಕುಲಪತಿ ಅಲಿ ಸೌದ್ ಅಲ್ ಬಿಮಾನಿ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮಹಾರಾಜ ಕಾಲೇಜಿನ ಅಂತಾರಾಷ್ಟ್ರೀಯ ಸಂಬಂಧ ವಿಭಾಗವು ಬುಧವಾರ ಆಯೋಜಿಸಿದ್ದ ‘ಭಾರತ-ಓಮನ್: ವಿಜ್ಞಾನ ತಂತ್ರಜ್ಞಾನ ಮತ್ತು ಸಾಗರೋತ್ತರ ಸಂಬಂಧಗಳ ಬಲವರ್ಧನೆ’ ಕುರಿತು ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಅವರು ಮಾತನಾಡಿದರು.

ರಾಜತಾಂತ್ರಿಕ ವ್ಯವಸ್ಥೆಯೆಂದರೆ ಅಂತಾರಾಷ್ಟ್ರೀಯ ಸಂಬಂಧ, ದೇಶಗಳ ನಡುವಿನ ಸಾಮಾನ್ಯ ಹಿತಾಸಕ್ತಿಯನ್ನು ಪೋಷಿಸುವ ಹಾಗೂ ದೇಶಗಳ ನಡುವಿನ ಶಾಂತಿ, ಸಾಮರಸ್ಯ ಹೆಚ್ಚಿಸುವುದು. ಪರಸ್ಪರರ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದು ಎಂದು ವ್ಯಾಖ್ಯಾನಿಸಿದರು.
ದೇಶದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಎಲ್ಲರ ಪ್ರಯತ್ನವು ಅಗತ್ಯವಾಗಿದೆ. ಇದು ಕೇವಲ ಒಬ್ಬರಿಂದ ಅಥವಾ ಒಂದು ಸಮೂಹದಿಂದ ಆಗುವ ಕೆಲಸವಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net