ಸೇವಾ ಗುಣದಿಂದ ನಾಯಕತ್ವದ ಶಕ್ತಿ ವೃದ್ಧಿ...

Indrali
Published on

ಉಡುಪಿ ರೋಟರಿ ಅಧ್ಯಕ್ಷ ರೊ.ಸೂರಜ್​ ಅನಿಸಿಕೆ

ಇಂದ್ರಾಳಿ ಶಾಲೆಯಲ್ಲಿ ಇಂಟರ್ಯಾಕ್ಟ್​ ಕ್ಲಬ್​ ಪದಗ್ರಹಣ

ವಿಜಯವಾಣಿ ಸುದ್ದಿಜಾಲ ಉಡುಪಿ

ವಿದ್ಯಾರ್ಥಿಗಳು ಧೈರ್ಯವಂತರಾಗಬೇಕು. ಸೇವೆ ಮಾಡುವ ಗುಣ ಬೆಳೆಸಿಕೊಂಡು ಸಮಾಜದಲ್ಲಿ ಆರೋಗ್ಯಯುತ ಬಾಂಧವ್ಯ ನಿರ್ಮಿಸಬೇಕು. ಅದರಿಂದ ನಾಯಕತ್ವದ ಶಕ್ತಿ ವೃದ್ಧಿಸುತ್ತದೆ. ಇದು ಮುಂದಿನ ತಮ್ಮ ಉಜ್ವಲ ಭವಿಷಕ್ಕೆ ಸಹಾಯಕವಾಗುತ್ತದೆ ಎಂದು ಉಡುಪಿ ರೋಟರಿ ಅಧ್ಯಕ್ಷ ರೊ.ಸೂರಜ್​ ತಿಳಿಸಿದರು.

ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಜುಲೈ 26ರಂದು ಆಯೋಜಿಸಿದ್ದ ಇಂಟರ್ಯಾಕ್ಟ್​ ಕ್ಲಬ್​ 2025-26ರ ಪದಗ್ರಹಣ ಸಮಾರಂಭದಲ್ಲಿ ಶಾಲೆಯ ವಿದ್ಯಾರ್ಥಿ, ಕ್ಲಬ್​ನ ನೂತನ ಅಧ್ಯಕ್ಷ ಶ್ರೀಪ್ರದನಿಗೆ ಕಾಲರಿಂಗ್​ ಮಾಡಿ ಮಾತನಾಡಿದರು.

ಶಾಲಾ ಸಂಚಾಲಕ ಕೆ.ಅಣ್ಣಪ್ಪ ಶೆಣೈ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳು ಶಿಸ್ತು ಅಳವಡಿಸಿಕೊಳ್ಳಬೇಕು. ಗುರು-ಹಿರಿಯರಿಗೆ ಗೌರವ ನೀಡಬೇಕು ಎಂದು ಕಿವಿಮಾತು ಹೇಳಿದರು.

ರೊ. ಕೆ.ಜಗದೀಶ ಕಾಮತ ಮಾತನಾಡಿ, ಸಮಾಜ ಸೇವೆ ಹಾಗೂ ವ್ಯಕ್ತಿತ್ವ ವಿಕಸನದ ಕುರಿತಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಉಡುಪಿ ರೋಟರಿ ಚೇರ್ಮನ್​ ಮಾಲತಿ, ಮಕ್ಕಳಿಗೆ ಹಿತವಚನ ನುಡಿದರು.

ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೆ.ವಿನಾಯಕ ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಕೆ.ರತ್ನಾಕರ ಶೆಣೈ, ವಿದ್ಯಾ ಅಮರ ಪೈ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ರೇಶ್ಮಾ ಪ್ರಭು, ರೋಟರಿ ಸದಸ್ಯರು ಹಾಗೂ ಇಂಟರ್ಯಾಕ್ಟ್​ ಕ್ಲಬ್​ನ ಶಾಲಾ ಸಂಯೋಜಕಿ ಸುಷ್ಮಾ ಎಸ್​.ಜಿ. ಉಪಸ್ಥಿತರಿದ್ದರು.

ಕ್ಲಬ್​ನ ನಿರ್ಗಮಿತ ಅಧ್ಯಕ್ಷೆ ಪ್ರತೀಕ್ಷಾ ಸ್ವಾಗತಿಸಿದರು. ನೂತನ ಅಧ್ಯಕ್ಷ ಶ್ರೀಪ್ರದ ಸದಸ್ಯರನ್ನು ಪರಿಚಯಿಸಿದರು. ನಮಿತಾ ವರದಿ ವಾಚಿಸಿದರು. ವೈಷ್ಣವಿ, ರೀಮಾ, ಸಂಜನಾ, ಕೃತಿ ಪ್ರಾರ್ಥಿಸಿದರು. ಪ್ರಖ್ಯಾತ್​ ಕಾರ್ಯಕ್ರಮ ನಿರೂಪಿಸಿದರು. ಸಂಜನಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net