

ಉಳ್ಳಾಲ: ತಲಪಾಡಿ ದೇವಿನಗರ ಶಾರದಾ ವಿದ್ಯಾನಿಕೇತನ ಪಿಯು ಕಾಲೇಜಿನಲ್ಲಿ ವನಮಹೋತ್ಸವ ಮತ್ತು 2025-26ನೇ ಸಾಲಿನ ಇಂಟರಾಕ್ಟ್ ಕ್ಲಬ್ ಪದಗ್ರಹಣ ಕಾರ್ಯಕ್ರಮ ಶನಿವಾರ ಮಂಗಳೂರಿನ ರೋಟರಿ ಕ್ಲಬ್ ಮಾರ್ಗದರ್ಶನದಲ್ಲಿ, ಸಂಸ್ಥೆಯ ನಿರ್ದೇಶಕ ಸಮೀರ್ ಪುರಾಣಿಕ್ ಆಯೋಜನೆಯಲ್ಲಿ ನಡೆಯಿತು.
ವನಮಹೋತ್ಸವದ ಪ್ರಯುಕ್ತ ಶಾರದಾ ಕ್ಯಾಂಪಸ್ನಲ್ಲಿ ನೆರಳು ನೀಡುವ ಹಲವು ವಿಶಿಷ್ಟ ಗಿಡಗಳನ್ನು ವಿದ್ಯಾರ್ಥಿಗಳು ನೆಟ್ಟರು. ಬಳಿಕ ಮಂಗಳೂರು ರೋಟರಿ ಕ್ಲಬ್ಬಿನ ಅಧ್ಯಕ್ಷ ವಿನೋದ್ ಅರಾನ್ನ, ಮಾಜಿ ಅಧ್ಯಕ್ಷ ದೇವರಾಜ್ ಫರ್ನಾಂಡಿಸ್, ಮಾಧವ ಸುವರ್ಣ ನೇತೃತ್ವದಲ್ಲಿ ವಿದ್ಯಾರ್ಥಿಗಳ ಇಂಟರಾಕ್ಟ್ ಕ್ಲಬ್ ಪದಗ್ರಹಣ ಕಾರ್ಯಕ್ರಮ ಜರುಗಿತು. ಯೂತ್ ಸರ್ವೀಸ್ ಡೈರೆಕ್ಟರ್ ಕಿಶನ್ ಕುಮಾರ್, ಪಾರ್ವತಿ ಕುನಾಲ್, ಪಿಯು ಕಾಲೇಜಿನ ಪ್ರಾಂಶುಪಾಲ ವಿನಾಯಕ್ ಬಿ.ಜಿ, ಉಪಪ್ರಾಂಶುಪಾಲ ಸುರೇಶ್ ಭಟ್ ಉಪಸ್ಥಿತರಿದ್ದರು.
ಕಾಲೇಜಿನ ಇಂಟರಾಕ್ಟ್ ಕ್ಲಬ್ಬಿನ ನಿರ್ವಾಹಕಿ ಸುಶ್ಮಿತಾ ಹಾಗೂ ಪ್ರಿಯಾ ಕೆ.ಎನ್. ಕಾರ್ಯಕ್ರಮ ಆಯೋಜಿಸಿದ್ದರು. ಇಂಟರಾಕ್ಟ್ ಕ್ಲಬ್ ಮಾಜಿ ಅಧ್ಯಕ್ಷೆ ಅಂಶಿ ಡಿ. ವರದಿ ವಾಚಿಸಿ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು. ನಮ್ಯ ಅಧ್ಯಕ್ಷರ ಪಾತ್ರ ಹಾಗೂ ಕರ್ತವ್ಯದ ಬಗ್ಗೆ ತಿಳಿಸಿದರು.