ಅಂತರ ವಿವಿ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ: ಬಿ.ಎಂ.ಸಿಂಚನಾ, ಕಿರಣಾ ಆಯ್ಕೆ

1
Published on

ತಮಿಳುನಾಡಿನ ಕಾರೈಕುಡಿಯ ಅಲಗಪ್ಪ ವಿಶ್ವವಿದ್ಯಾಲಯದಲ್ಲಿ ಮಾ.29 ರಿಂದ ಏಪ್ರಿಲ್ 1 ರವರೆಗೆ ನಡೆಯಲಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಕ್ರೀಡಾಪಟು ದ್ವಿತೀಯ ಬಿಎ ವಿದ್ಯಾರ್ಥಿನಿ ಬಿ.ಎಂ.ಸಿಂಚನಾ ಮತ್ತು ಪ್ರಥಮ ಬಿಎ ವಿದ್ಯಾರ್ಥಿನಿ ಕಿರಣಾ ಆಯ್ಕೆಯಾಗಿದ್ದಾರೆ.

ಈ ಕ್ರೀಡಾಪಟುಗಳು ಮೈಸೂರು ವಿವಿ ತಂಡವನ್ನು ಪ್ರತಿನಿಧಿಸಲಿದ್ದಾರೆ. ಬಿ.ಎಂ.ಸಿಂಚನಾ ಅವರು ಸಾಲಿಗ್ರಾಮ ತಾಲೂಕಿನ ಬೆನಗನಹಳ್ಳಿ ಗ್ರಾಮದ ಬಿ.ಎನ್.ಮಂಜುನಾಥ ಮತ್ತು ಜೆ.ಸವಿತಾ ದಂಪತಿ ಪುತ್ರಿ. ಕಿರಣಾ ಅವರು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಮಾಕವಳ್ಳಿ ಗ್ರಾಮದ ಮಾಗಣ್ಣಗೌಡ ಮತ್ತು ಶಶಿಕಲಾ ದಂಪತಿ ಪುತ್ರಿಯಾಗಿದ್ದಾರೆ. ಈ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರಾದ ಡಾ.ಎಂ.ವಿಜಯಮ್ಮ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಸಿ.ಎಸ್.ಮೋಹನ್ ಕುಮಾರ್, ಡಾ.ಕೆ.ಎಸ್.ಭಾಸ್ಕರ್ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net