ಐವರ್ನಾಡಲ್ಲಿ ಅಂತಾರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟ

New Project (29)
Published on

ಸುಳ್ಯ: ಗೆಳೆಯರ ಬಳಗ ಐವರ್ನಾಡು ಆಶ್ರಯದಲ್ಲಿ ’ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್, ದ.ಕ.ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಹಾಗೂ ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಅಂತಾರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟಕ್ಕೆ ಶನಿವಾರ ಐವರ್ನಾಡು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಿತು.

ಹಿರಿಯ ಕೃಷಿಕ ಕೊರಗಪ್ಪ ಗೌಡ ಪೂಜಾರಿಮನೆ ತೆಂಗಿನಕಾಯಿ ಒಡೆಯುವುದರ ಮೂಲಕ ಚಾಲನೆ ನೀಡಿದರು. ಗೆಳೆಯರ ಬಳಗದ ಗೌರವಾಧ್ಯಕ್ಷ ಎಸ್.ಎನ್.ಮನ್ಮಥ, ಅಧ್ಯಕ್ಷ ಸಾತ್ವಿಕ್ ಕುದುಂಗು, ಸಂಚಾಲಕ ವಾಸುದೇವ ಬೊಳುಬೈಲು, ಸ್ವಾಗತ ಸಮಿತಿ ಸಂಚಾಲಕ ದಿನೇಶ್ ಮಡ್ತಿಲ, ಪ್ರಧಾನ ಕಾರ್ಯದರ್ಶಿ ಪ್ರಮೋದ್ ಕಣಿಲೆಗುಂಡಿ ಇದ್ದರು.

ಎರಡು ದಿನ ನಡೆಯುವ ಈ ಪಂದ್ಯಾಟದಲ್ಲಿ ರಾಜ್ಯ ಹಾಗೂ ಕೇರಳ, ತಮಿಳುನಾಡಿನ ಬಲಿಷ್ಠ 12 ತಂಡಗಳು ಭಾಗವಹಿಸುತ್ತಿವೆ. ವಿಜೇತ ತಂಡಗಳಿಗೆ ಪಂದ್ಯಾಟದ ಪ್ರಥಮ ನಗದು ಬಹುಮಾನ 70,000 ರೂ., ದ್ವಿತೀಯ 50,000 ರೂ., ತೃತೀಯ 25,000 ರೂ., ಚತುರ್ಥ 25,000 ರೂ.ಹಾಗೂ ಶಾಶ್ವತ ಫಲಕ ದೊರೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net