ಕ್ರೀಡಾಪಟುಗಳಿಗೆ ಸಹಿಷ್ಣುತಾ ಮನೋಭಾವ ಅಗತ್ಯ

20Kush02
ಕೂಡಿಗೆಯ ಸೈನಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟದಲ್ಲಿ ಸುಬ್ರೊತೋ ನಿಲಯ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ನರೇಶ್‌ಕುಮಾರ್ ಸೈಧಾ, ಕರ್ನಲ್ ಅಮರ್‌ಜೀತ್‌ಸಿಂಗ್, ಪಿ.ಪ್ರಕಾಶ್‌ರಾವ್, ಮನ್‌ಪ್ರೀತ್ ಸಿಂಗ್ ಇತರರು ಇದ್ದರು.
Published on

ಕುಶಾಲನಗರ: ಕ್ರೀಡಾಪಟುಗಳು ಸಹಿಷ್ಣುತಾ ಮನೋಭಾವದೊಂದಿಗೆ ಸಕ್ರಿಯವಾಗಿ ಕ್ರೀಡಾಕೂಟದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಏರ್‌ಫೋರ್ಸ್ ಕಮಾಂಡ್ ಆಸ್ಪತ್ರೆಯ ಡೆಪ್ಯುಟಿ ಕಮಾಂಡೆಂಟ್ ನರೇಶ್‌ಕುಮಾರ್ ಸೈಧಾ ಸಲಹೆ ನೀಡಿದರು.

ಕೂಡಿಗೆಯ ಸೈನಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ 2023-24ನೇ ಸಾಲಿನ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕ್ರೀಡಾಸ್ಫೂರ್ತಿಯ ಮೌಲ್ಯಗಳನ್ನು ಅಳವಡಿಸಿಕೊಂಡು ಗೆಲುವು ಸಂಪಾದಿಸಬೇಕು. ಅಂತೆಯೆ ಸೋಲುಗಳಿಂದ ತಮ್ಮ ತಪ್ಪುಗಳನ್ನು ಅರಿಯಬೇಕು ಎಂದರು. ಶಾಲೆಯ ಕ್ರೀಡಾನಾಯಕ ಕೆಡೆಟ್ ದರ್ಶನ್ ಪಡ್ನಾಡ್ ಕ್ರೀಡಾಜೊ್ಯೀೀತಿ ಬೆಳಗಿಸಿದರು.

ಬಳಿಕ ಅವರ ನೇತೃತ್ವದಲ್ಲಿ ಎಲ್ಲ ಸ್ಪರ್ಧಾಳುಗಳು ಪಥಸಂಚಲನ ನಡೆಸಿದರು. ಸಮಾರೋಪ ಸಮಾರಂಭ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ನಿವೃತ್ತ ಕಮೋಡೋರ್ ಎಂ.ಟಿ.ರಮೇಶ್, ಪ್ರಾಮಾಣಿಕತೆ, ಧೈರ್ಯ, ಶೌರ್ಯ, ಶಿಸ್ತು ಮತ್ತು ದೃಢ ನಿರ್ಧಾರ ಕ್ರೀಡಾಪಟುಗಳಿಗೆ ಅಗತ್ಯ. ವಿದ್ಯಾರ್ಥಿಗಳು ಸಾಧ್ಯವಾದರೆ ಕ್ರೀಡೆಯಲ್ಲಿಯೇ ತಮ್ಮ ವೃತ್ತಿಜೀವನ ಮುಂದುವರಿಸಬಹುದೆಂದು ತಿಳಿಸಿದರು.

ಕ್ರೀಡಾಕೂಟ ಯಶಸ್ವಿಯಾಗಿ ಪೂರ್ಣಗೊಂಡಿತು. ಅತಿಥಿಗಳ ಸಮ್ಮುಖದಲ್ಲಿ ಹಿರಿಯ ವಿದ್ಯಾರ್ಥಿಗಳಿಗಾಗಿ 4100 ಮೀಟರ್ ರಿಲೇ ಓಟ ಹಾಗೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಹಗ್ಗಜಗ್ಗಾಟ ಸ್ಪರ್ಧೆ ಗಮನ ಸೆಳೆಯಿತು. ಸುಬ್ರೊತೋ ನಿಲಯ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು.

ಶಾಲೆ ಪ್ರಾಂಶುಪಾಲ ಕರ್ನಲ್ ಅಮರ್‌ಜೀತ್‌ಸಿಂಗ್, ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ.ಪ್ರಕಾಶ್‌ರಾವ್, ಉಪಪ್ರಂಶುಪಾಲ ಸ್ಕ್ವಾಡ್ರನ್ ಲೀಡರ್ ಮನ್‌ಪ್ರೀತ್‌ಸಿಂಗ್, ಹಿರಿಯ ಶಿಕ್ಷಕರಾದ ಎನ್. ವಿಬಿನ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net