ಅಂತರ್ ಜಿಲ್ಲಾಮಟ್ಟದ ಕುಣಿತ ಭಜನಾ ಸ್ಪರ್ಧೆ

thrasi
Published on

ಗಂಗೊಳ್ಳಿ: ಶ್ರೀ ಇಂದುಧರ ದೇವಸ್ಥಾನದಲ್ಲಿ 80ನೇ ಮಹಾಶಿವರಾತ್ರಿ ಮಹೋತ್ಸವ ಅಂಗವಾಗಿ ಅಂತರ್ ಜಿಲ್ಲಾಮಟ್ಟದ ಕುಣಿತ ಭಜನಾ ಸ್ಪರ್ಧೆ ಗಂಗೊಳ್ಳಿ ಎಸ್‌ವಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.

ಧಾರ್ಮಿಕ ಮುಖಂಡ ಬಿ.ಸದಾನಂದ ಶೆಣೈ ಉದ್ಘಾಟಿಸಿದರು. ಗಂಗೊಳ್ಳಿ ಪರ್ಶಿನ್ ಮೀನುಗಾರರ ಸ್ವಸಹಾಯ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಾ.ಗಣೇಶ್ ಗಂಗೊಳ್ಳಿ, ಜಾನಪದ ಗಾಯಕ, ಕಲಾವಿದ ಡಾ.ಸಚಿನ್ ಸಾಲಿಯಾನ್ ಮತ್ತು ಗಾಯಕರು, ತಬಲಾ ವಾದಕ ಬಿ.ಪ್ರಕಾಶ್ ಶೆಣೈ ಗಂಗೊಳ್ಳಿ ಅವರನ್ನು ಸನ್ಮಾನಿಸಲಾಯಿತು.

ಉಪವಲಯ ಅರಣ್ಯಾಧಿಕಾರಿ ಕೆ.ಸದಾಶಿವ ಮಾವಿನಕಟ್ಟೆ, ಮತ್ಸೊೃೀದ್ಯಮಿ ಜಿ.ಟಿ.ಮಂಜುನಾಥ ಗಂಗೊಳ್ಳಿ, ಗಂಗೊಳ್ಳಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಬಿಲ್ಲವ, ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ಜಯಂತಿ ಖಾರ್ವಿ, ದೇವಸ್ಥಾನದ ಅಧ್ಯಕ್ಷ ಗುರುರಾಜ್ ಗಂಗೊಳ್ಳಿ, ಕಾರ್ಯದರ್ಶಿ ನರಸಿಂಹ ಎಂ.ಜಿ.ಉಪಸ್ಥಿತರಿದ್ದರು. ಅಶೋಕ್ ಎನ್.ಡಿ.ಸ್ವಾಗತಿಸಿದರು. ವರದರಾಜ್ ವಂದಿಸಿದರು. ಸುಂದರ ಜಿ.ಗಂಗೊಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net