ತುಮಕೂರಿನ ಚೆಸ್‌ ಟೂರ್ನಿಯಲ್ಲಿ ಮಂಡ್ಯ ರಾಯಲ್‌ಚೆಸ್ ಅಕಾಡೆಮಿ ಸಾಧನೆ: ಬಲ್ವಿತ್‌ಗೌಡ ಚಾಂಪಿಯನ್

Inter District Chess Tournament Mandya
Published on

ಮಂಡ್ಯ: ತುಮಕೂರಿನ ಅನನ್ಯ ಪಿಯು ಕಾಲೇಜಿನಲ್ಲಿ ಚೆಸ್ ನೈಟ್ಸ್ ಅಕಾಡೆಮಿ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಅಂತರ್ ಜಿಲ್ಲಾ ಚೆಸ್ ಟೂರ್ನಿಯಲ್ಲಿ ಮಂಡ್ಯ ರಾಯಲ್ ಚೆಸ್ ಅಕಾಡೆಮಿ ವಿದ್ಯಾರ್ಥಿಗಳು ವಿವಿಧ ವಯೋಮಾನದ ವಿಭಾಗಗಳಲ್ಲಿ ಟ್ರೋಫಿಗಳನ್ನು ಪಡೆದರು.

ತುಮಕೂರು, ಶಿವಮೊಗ್ಗ, ಹಾಸನ, ಮಂಡ್ಯ, ಮೈಸೂರು, ಬೆಂಗಳೂರಿನ ಆಟಗಾರರ ಚೆಸ್ ಪಂದ್ಯಾವಳಿಯಲ್ಲಿ 76 ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. 9 ವರ್ಷದೊಳಗಿನ ಬಾಲಕಿಯರ ವರ್ಗದಲ್ಲಿ ವಿ.ನಿಹಾರಿಕಾ 2ನೇ ಸ್ಥಾನ, 11ರೊಳಗಿನ ಬಾಲಕರ ವಿಭಾಗದಲ್ಲಿ ಸಿ.ಚಿರಾಗ್ 5ನೇ ಸ್ಥಾನ, 13ರೊಳಗಿನ ಬಾಲಕರ ವಿಭಾಗದಲ್ಲಿ ಎ.ಬಲ್ವಿತ್‌ಗೌಡ ಪ್ರಥಮ ಸ್ಥಾನ ಮತ್ತು ಬಾಲಕಿಯರ ವಿಭಾಗದಲ್ಲಿ ಎಂ.ಎಸ್.ಜ್ಞಾನವಿ ಪ್ರಥಮ ಸ್ಥಾನ, 15ರೊಳಗಿನ ಬಾಲಕರ ವಿಭಾಗದಲ್ಲಿ ಬ್ರಿಜೇಶ್ 3ನೇ ಸ್ಥಾನ, ಕೌಶಲ್ ಎ ಗೌಡ 5ನೇ ಸ್ಥಾನ ಪಡೆದು ಗೆಲುವು ಸಾಧಿಸಿದ್ದಾರೆ. ಅಂತೆಯೇ ಅಂತರ ಜಿಲ್ಲಾ ಚೆಸ್ ಪಂದ್ಯಾವಳಿಯಲ್ಲಿ ಬಲ್ವಿತ್‌ಗೌಡ ಚಾಂಪಿಯನ್‌ಯಾಗಿ ಹೊರಹೊಮ್ಮಿದರು. ವಿಜೇತರಾದವರನ್ನು ಮುಖ್ಯ ತರಬೇತುದಾರ ಎಂ.ಎಸ್.ಚೇತನ್ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net