

ಹಲಗೂರು: ಎನ್.ಹಲಸಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ರಾಷ್ಟ್ರೀಯ ಆಹಾರ ಮತ್ತು ಪೌಷ್ಟಿಕ ಭದ್ರತೆ ಯೋಜನೆಯಡಿ ರೈತರಿಗೆ ದ್ವಿದಳ ಧಾನ್ಯಗಳ ಅಂತರ ಬೆಳೆ ಹಾಗೂ ರೈತರಿಗೆ ರಾಗಿ ಇಳುವರಿ ರಾಗಿ ಸಾಲು ಬಿತ್ತನೆ ಮಾಡುವ ಬಗ್ಗೆ ತರಬೇತಿಯನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಮಂಡ್ಯ ವಿ.ಸಿ. ಫಾರ್ಮ್ ವಿಜ್ಞಾನಿ ಡಾ. ರೇಖಾ ಮಾತನಾಡಿ, ರಾಗಿ ಉತ್ಪಾದನೆ ಹೆಚ್ಚಿಸಲು ನಮ್ಮ ಇಲಾಖೆಯಿಂದ ನೀಡುತ್ತಿರುವ ಗೊಬ್ಬರಗಳ ಜತೆ ಸೂಕ್ಷ್ಮಾಣು ಗೊಬ್ಬರ, ಲಘು ಪೋಷಕಾಂಶಗಳಾದ ಸತುವಿನ ಸಲ್ಫೇಟ್, ಬೋರಾನ್ ಬಳಕೆಯಿಂದ ರಾಗಿ ಇಳುವರಿ ಹೆಚ್ಚು ಮಾಡಬಹುದು. ನಮ್ಮ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ಸಿಗುವ ಸವಲತ್ತುಗಳನ್ನು ಬಳಸಿಕೊಂಡು ಉತ್ತಮ ಬೆಳೆ ಬೆಳೆಯಿರಿ ಎಂದು ಸಲಹೆ ನೀಡಿದರು. ಮಳವಳ್ಳಿ ತಾಲೂಕು ಸಹಾಯಕ ಕೃಷಿ ನಿರ್ದೇಶಕ ದೀಪಕ್, ಕೃಷಿ ಅಧಿಕಾರಿಗಳಾದ ರಾಜೇಶ್, ಮಹದೇವಯ್ಯ, ಡಾ. ಬಿ.ಟಿ.ಎಂ. ಲತಾ, ಪ್ರಸನ್ನಕುಮಾರ್, ಸುಚಿತ್ರಾ ಹಾಗೂ ರೈತರು ಭಾಗವಹಿಸಿದ್ದರು.