ಆಳ್ವಾಸ್ 24ನೇ ಬಾರಿ ಚಾಂಪಿಯನ್ : ಅಂತರ್ ಕಾಲೇಜು ಪವರ್ ಲಿಫ್ಟಿಂಗ್ ಸ್ಪರ್ಧೆ

New Project (11)
Published on

ಮೂಡುಬಿದಿರೆ: ಮಂಗಳೂರು ಯುನಿವರ್ಸಿಟಿ ಹಾಗೂ ಬ್ರಹ್ಮಾವರದ ಎಸ್.ಎಂ.ಎಸ್ ಕಾಲೇಜಿನ ಆಶ್ರಯದಲ್ಲಿ ನಡೆದ ಮಂಗಳೂರು ವಿ.ವಿ.ಅಂತರ್ ಕಾಲೇಜು ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ಕಾಲೇಜು ಸತತ 24ನೇ ಬಾರಿಗೆ ಪುರುಷ ಹಾಗೂ ಮಹಿಳಾ ಎರಡು ವಿಭಾಗದಲ್ಲಿ ತಂಡ ಪ್ರಶಸ್ತಿ ಪಡೆದು ಚಾಂಪಿಯನ್ ಆಗಿದೆ.

ಮಹಿಳಾ ವಿಭಾಗದಲ್ಲಿ 4 ಚಿನ್ನ, 3 ಬೆಳ್ಳಿ, ಪುರುಷರ ವಿಭಾಗದಲ್ಲಿ 4 ಚಿನ್ನ, 3 ಬೆಳ್ಳಿ ಹಾಗೂ 1 ಕಂಚಿನ ಪದಕ ಪಡೆಯುವುದರೊಂದಿಗೆ ಅತ್ಯುತ್ತಮ ಸಾಧನೆ ಮಾಡಿದೆ. ಮಹಿಳಾ ವಿಭಾಗದ 47 ಕೆ.ಜಿ. ದೇಹತೂಕ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಶ್ರಾವ್ಯಾ ಚಿನ್ನ, ಚಂದ್ರಿಕಾ ಬೆಳ್ಳಿ, ಅನುಷಾ ಚಿನ್ನ, ಸೀಮಾ ಚಿನ್ನ, ಮಲ್ಲಮ್ಮ ಬೆಳ್ಳಿ, ವಿತಶ್ರೀ ಬೆಳ್ಳಿ ಮತ್ತು ನಾಗಶ್ರೀ ಚಿನ್ನದ ಪದಕ ಗಳಿಸಿದ್ದಾರೆ.

ಪುರುಷರ ವಿಭಾಗದಲ್ಲಿ ವಿದ್ಯಾರ್ಥಿ ಹಾಲೇಶ್ ಚಿನ್ನ, ರಮೇಶ್ ಬೆಳ್ಳಿ, ಸಂತೋಷ್ ಚಿನ್ನ, ಗಣೇಶ್ ಕಂಚು, ಪ್ರತ್ಯುಶ್ ಬೆಳ್ಳಿ, ಶಶಾಂಕ್ ಕಂಚು, ನಾಗೇಂದ್ರ ಅಣ್ಣಪ್ಪ ಚಿನ್ನ ಮತ್ತು ಜೋಶುವ ರಾಜಕುಮಾರ್ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ಮಹಿಳಾ ವಿಭಾಗದಲ್ಲಿ ‘ಕೂಟದ ಬೆಸ್ಟ್ ಲಿಫ್ಟರ್ ವೈಯಕ್ತಿಕ ಪ್ರಶಸ್ತಿ’ಯನ್ನು ಆಳ್ವಾಸ್ ಕಾಲೇಜಿನ ನಾಗಶ್ರೀ ಪಡೆದುಕೊಂಡಿದ್ದಾರೆ. ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸಾಧನೆಗೈದ ಸಂಸ್ಥೆಯ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net