

ಬೈಲಹೊಂಗಲ: ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಬೈಲಹೊಂಗಲ ನಗರಕ್ಕೆ ತೀವ್ರ ನಿಗಾ ಟಕದ 50 ಬೆಡ್ ಹಾಸ್ಪಿಟಲ್ ಮಂಜೂರು ಮಾಡಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ತಿಳಿಸಿದರು. ಈ ಕುರಿತು ಮಾಹಿತಿ ನೀಡಿದ ಅವರು, ತಾಲೂಕಿನ ಬಡ ಜನರಿಗೆ ತ್ವರಿತಗತಿಯಲ್ಲಿ ಆರೋಗ್ಯ ಸೇವೆ ಹಾಗೂ ತುರ್ತು ಚಿಕಿತ್ಸೆ ದೊರೆಯಲಿ ಎಂಬ ಸದುದ್ದೇಶದಿಂದ ಅಂದಾಜು 23.75 ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿ ಆರಂಭವಾಗಲಿರುವ ತೀವ್ರ ನಿಗಾ ಟಕ ಅನುಕೂಲವಾಗಲಿದೆ. ಜನ ಸಾಮಾನ್ಯರು ಚಿಕಿತ್ಸೆಗಾಗಿ ವಿವಿಧ ನಗರಗಳಿಗೆ ತೆರಳುವ ತಾಪತ್ರಯ ದೂರವಾಗಲಿದೆ. ಸರ್ಕಾರದ ಅನುಮತಿಯೊಂದಿಗೆ ಶ್ರೀ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ 100 ಹಾಸಿಗೆ ಹಾಗೂ 100 ಹಾಸಿಗೆ ತಾಯಿ ಮತ್ತು ಮಗು ಆರೈಕೆ ಕೇಂದ್ರ ಇದೆ. ಅತ್ಯಾಧುನಿಕ ವೆದ್ಯಕಿಯ ಸೌಲಭ್ಯದೊಂದಿಗೆ ನೂತನ ಕಟ್ಟಡ, ವೆದ್ಯರ ಸೇವೆ ತೀವ್ರ ನಿಗಾ ಟಕದಲ್ಲಿ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು. ನಮ್ಮ ಕೋರಿಕೆ ಮೇರೆಗೆ ಸೆ.25ರಂದು ಸಿಎಂ ಸಿದ್ದರಾಮಯ್ಯ ಅಧ್ಯತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಯಾಗಿದೆ. ಮಂಜೂರು ಮಾಡಿದ ಸಿಎಂ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹಾಗೂ ಸಚಿವ ಸಂಪುಟಕ್ಕೆ ಧನ್ಯವಾದ ತಿಳಿಸಿದರು.