ಜೈನಮುನಿ ಬರ್ಬರ ಹತ್ಯೆಗೆ ತೀವ್ರ ಆಕ್ರೋಶ

Intense outrage over the killing of Jain Muni barbara
ಮುದ್ದೇಬಿಹಾಳ ನಗರದಲ್ಲಿ ಸೋಮವಾರ ಜೈನ ಸಮಾಜದ ದಿಗಂಬರ, ಶ್ವೇತಾಂಬರ ಸಮಾಜದ ಬಾಂಧವರು ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ಸೋಮವಾರ ನಡೆದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
Published on

ಮುದ್ದೇಬಿಹಾಳ: ಜೈನ ಮುನಿಗಳಿಗೆ ರಕ್ಷಣೆ ಸಿಗಬೇಕು ಹಾಗೂ ಕಾಮಕುಮಾರ ಶ್ರೀಗಳ ಕೊಲೆ ಮಾಡಿರುವ ಹಂತಕರಿಗೆ ಕಠಿಣ ಶಿಕ್ಷೆ ಒದಗಿಸಬೇಕು ಎಂದು ಆಗ್ರಹಿಸಿ ಸೋಮವಾರ ಪಟ್ಟಣದಲ್ಲಿ ದಿಗಂಬರ, ಶ್ವೇತಾಂಬರ ಜೈನ ಸಮಾಜದ ಬಾಂಧವರು ತೋಳಿಗೆ ಕಪ್ಪುಬಟ್ಟೆ ಧರಿಸಿ ಮೌನ ಪ್ರತಿಭಟನೆ ನಡೆಸಿದರು.

ಹತ್ಯೆಗೀಡಾದ ಜೈನ ಮುನಿಗಳ ಆತ್ಮಕ್ಕೆ ಪಟ್ಟಣದ ದ್ಯಾಮವ್ವನ ಕಟ್ಟೆಯಲ್ಲಿ ಶಾಂತಿಕೋರಿ ಶ್ರದ್ಧಾಂಜಲಿ ಸಭೆ ನಡೆಸಿ ಅಲ್ಲಿಂದ ಮೌನವಾಗಿ ತಹಸೀಲ್ದಾರ ಕಚೇರಿಗೆ ಜೈನ ಸಮಾಜದ ಸಂಘಟನೆಗಳೊಂದಿಗೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆಗಮಿಸಿದರು.

ಹೋರಾಟಗಾರ ಬಸವರಾಜ ನಂದಿಕೇಶ್ವರಮಠ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಶುರಾಮ ಪವಾರ, ಶ್ವೇತಾಂಬರ ಜೈನ ಸಮಾಜದ ಅಧ್ಯಕ್ಷ ಸತೀಶ ಓಸ್ವಾಲ್ ಮಾತನಾಡಿ, ಇಡೀ ಜಗತ್ತಿಗೆ ಶಾಂತಿ ಸಂದೇಶ ಸಾರಿದ ಜೈನ ಧರ್ಮ ಇಂತಹ ಧರ್ಮ ಗುರುವನ್ನು ಭೀಕರವಾಗಿ ಹತ್ಯೆ ಮಾಡಿರುವುದು ಖಂಡನೀಯ. ಇಬ್ಬರು ಆರೋಪಿಗಳಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜೈನ ಸಮಾಜದ ಮುನಿಗಳಷ್ಟೇ ಅಲ್ಲದೇ ಎಲ್ಲ ಗುರುಗಳಿಗೆ ಸರ್ಕಾರ ರಕ್ಷಣೆ ನೀಡಬೇಕು. ಸಮಾಜ, ಧರ್ಮದ ರಕ್ಷಣೆ ಸರಕಾರದ ಹೊಣೆಯಾಗಿದೆ ಎಂದರು.

ಮುಖಂಡ ಅರವಿಂದ ಕೊಪ್ಪ, ಅಬ್ದುಲರಹೆಮಾನ್ ಬಿದರಕುಂದಿ ಮಾತನಾಡಿ, ಎಲ್ಲ ಸಮಾಜದಲ್ಲಿ ಇಂತಹ ಕೆಲಸ ಮಾಡುವ ಶೇ. 1.1 ರಷ್ಟು ದುಷ್ಟರು ಇದ್ದೇ ಇದ್ದಾರೆ. ಇಂತಹ ಘಟನೆಗಳಾದಾಗ ನಾವು ವಿಚಾರ ನಡೆಸಬೇಕು. ಪ್ರಕರಣದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಒದಗಿಸಲು ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸಿ ತಿಂಗಳಲ್ಲೇ ಕೇಸ್ ಪರಿಹರಿಸಿ ಜೈನ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಪ್ರಭು ಕಡಿ, ಜೈನ ಸಮಾಜದ ಮುಖಂಡ ಎಂ.ಬಿ. ಸಗರಿ, ಕೆ.ಎಂ. ರಿಸಾಲ್ದಾರ್ ಮತ್ತಿತರರು ಮಾತನಾಡಿದರು. ಶಿರಸ್ತೇದಾರ ಎ.ಬಿ. ಹಿರೇಮಠ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮುಖಂಡರಾದ ಬಾಬು ಗೋಗಿ, ಮಾಣಿಕಚಂದ ದಂಡಾವತಿ, ಜಗನ್ನಾಥ ಗೌಳಿ, ಬಾಬುಲಾಲ ಓಸ್ವಾಲ್, ಗುಲಾಬಚಂದ ಓಸ್ವಾಲ್, ಮೋಹನ ಓಸ್ವಾಲ್, ಅಭಿನಂದನ್ ಕಡೇಹಳ್ಳಿ, ಸುರೇಶಗೌಡ ಪಾಟೀಲ್, ಭರತೇಶ ಮಂಕಣಿ, ಭರತೇಶ ಶೆಟ್ಟಿ, ರವಿ ದಂಡಾವತಿ, ಸುಧಾಕರ ತಂಗಾ, ಬಿ.ಎಸ್. ಮೇಟಿ, ರಾಜಶೇಖರ ಹೊಳಿ, ಸಂಜು ಬಾಗೇವಾಡಿ, ಸಂಗಮೇಶ ನಾಲತವಾಡ, ಉದಯ ರಾಯಚೂರ, ಶೇಖರ ಢವಳಗಿ ಶ್ರೀಪಾಲ ಪೋರ‌್ವಾಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net