

ಬೆಳಗಾವಿ: ಇಲ್ಲಿನ ಫೌಂಡ್ರಿ ಕ್ಲಸ್ಟರ್ ಸಭಾಂಗಣದಲ್ಲಿ ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಬೌದ್ಧಿಕ ಆಸ್ತಿ ಸೌಲಭ್ಯ ಕೇಂದ್ರ (ಐಪಿಎಫ್ಸಿ), ಕೇಂದ್ರ ಸರ್ಕಾರದ ಎಂಎಸ್ಎಂಇ ಸಚಿವಾಲಯದ ಎಂಎಸ್ಎಂಇ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ ಸಂಯುಕ್ತ ಆಶ್ರಯದಲ್ಲಿ ಈಚೆಗೆ ಬೌದ್ಧಿಕ ಆಸ್ತಿ ಜಾಗೃತಿ ಕಾರ್ಯಕ್ರಮ ಜರುಗಿತು.
ಎಂಎಸ್ಎಂಇಗಳು, ಸ್ಟಾರ್ಟ್ಅಪ್, ಆವಿಷ್ಕಾರಕರು ಹೊಸತನ ಮತ್ತು ವ್ಯಾಪಾರ ಅಭಿವೃದ್ಧಿಗೆ ಬೌದ್ಧಿಕ ಆಸ್ತಿ (ಐಪಿ)ಹೇಗೆ ಪೂರಕವಾಗಬಹುದು ಎಂಬುದರ ಕುರಿತು ತರು ಮಾಹಿತಿ ನೀಡಿದರು. ಪೇಟಂಟ್ಗಳು, ಟ್ರೇಡ್ಮಾರ್ಕ್ಗಳು, ವ್ಯಾಪಾರೀಕರಣ ಮತ್ತು ಹಕ್ಕುಗಳ ಜಾರಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಐಪಿ ಕಚೇರಿ ಅಧಿಕಾರಿಗಳು, ಕಾನೂನು ತರು ಮತ್ತು ೇತ್ರ ಪರಿಣಿತರು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಸೌಲಭ್ಯ ಕುರಿತು ಆಯೋಜಕರು ವಿವರಿಸಿದರು. ಜತೆಗೆ ಈ ಸೌಲಭ್ಯಗಳನ್ನು ಉದ್ಯಮಿಗಳು, ಆವಿಷ್ಕಾರಕರು, ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಲು ಕೋರಿದರು. ಮೂಲಭೂತ ವಿಷಯಗಳನ್ನು ಒಳಗೊಂಡ ಪುಸ್ತಕ ಬಿಡುಗಡೆ ಮಾಡಲಾಯಿತು.
ಎಕೆಪಿ ಫೌಂಡ್ರೀಸ್ ಅಧ್ಯ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಮ ಭಂಡಾರೆ, ಎಂಎಸ್ಎಂಇ ಸಹ ನಿರ್ದೇಶಕ ಕಾರ್ತಿಕ್ ಆರ್., ಬಿ.ವಿ. ಬೆಲ್ಲದ ಕಾನೂನು ಕಾಲೇಜಿನ ಪ್ರಾಧ್ಯಾಫಕಿ ಡಾ. ಅಶ್ವಿನಿ ಹಿರೇಮಠ, ಎಂ. ಎಸ್. ಶೇಷಗಿರಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಎಸ್.ಎಫ್ ಪಾಟೀಲ, ಹರೀಶ ಅಗಡಿ, ಡಾ. ಅರುಣ ತಿಗಡಿ, ಡಾ. ವಿನಾಯಕ ಹೊಸಮನಿ ಇತರರಿದ್ದರು.