ಭಗವದ್ಗೀತೆ ಪಠಣದಿಂದ ಬೌದ್ಧಿಕ ಬೆಳವಣಿಗೆ

New Bhagavdgeeta new
Published on

ಹುಬ್ಬಳ್ಳಿ: ಇಡೀ ವಿಶ್ವವೇ ಬೆರಗುಗೊಳಿಸುವಂಥ ಉಪದೇಶಗಳನ್ನು ಅರ್ಜುನನಿಗೆ ಬೋಧನೆ ಮಾಡಿದ ಶ್ರೀಕೃಷ್ಣ ಒಬ್ಬ ಸರ್ವಾಂತರ್ಯುಮಿ ವಿಶ್ವ ಗುರುವಾಗಿದ್ದಾನೆ. ಭಗವದ್ಗೀತೆ ಪಠಣದ ಮೂಲಕ ಶ್ರೀ ಕೃಷ್ಣನ ಮೊರೆ ಹೋದರೆ ಸಕಲ ಸಿದ್ಧಿ ಸಾಧನೆಯಾಗುತ್ತದೆ ಎಂದು ಹಿರಿಯ ವೈದ್ಯ ಡಾ. ಆರ್.ಎನ್. ಜೋಶಿ ಹೇಳಿದರು.

ಧಾರವಾಡ ಜಿಲ್ಲಾ ಭಗವದ್ಗೀತಾ ಅಭಿಯಾನ ಸಮಿತಿಯ ಆಶ್ರಯದಲ್ಲಿ ಇಲ್ಲಿಯ ಆದರ್ಶ ನಗರದ ರೋಟರಿ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಭಗವದ್ಗೀತಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ಭಗವಂತ ಎಲ್ಲೆಡೆ ಇದ್ದಾನೆ. ಆದರೆ, ಕಣ್ಣಿಗೆ ಕಾಣುವುದಿಲ್ಲ. ಇದು ಭಗವದ್ಗೀತೆೆಯ ಬಹುಮುಖ್ಯ ಸಾರ. ಗೀತೆಯ ಹನ್ನೊಂದನೇ ಅಧ್ಯಾಯದಲ್ಲಿ ವಿಶ್ವರೂಪ ದರ್ಶನವಿದೆ. ಅರ್ಜುನನಿಗೆ ತನ್ನ ನಿಜ ರೂಪವನ್ನು ಆತ ಸಾಕ್ಷಾತ್ಕರಿಸಿ ಅವನ ಕಣ್ಣು ತೆರೆಸಿದ್ದಾನೆ. ಅದೇ ರೀತಿ ಪ್ರತಿಯೊಬ್ಬರೂ ಶ್ರದ್ಧೆ, ಭಕ್ತಿಯಿಂದ ಮೊರೆ ಹೋದರೆ ಜ್ಞಾನ ಪ್ರಾಪ್ತಿಯಾಗುತ್ತದೆ ಎಂದರು.

ಮಕ್ಕಳು ಭಗವದ್ಗೀತೆಯನ್ನು ನಿತ್ಯ ಪಠಣ ಮಾಡಿದರೆ ಬೌದ್ಧಿಕ ಬೆಳವಣಿಗೆಯಾಗುವ ಜತೆಗೆ ಜೀವನ ಸಾರ್ಥಕವಾಗುತ್ತದೆ ಎಂದರು.</p><p>ಎನ್​ಎಲ್​ಎ ಶಿಕ್ಷಣ ಸಂಸ್ಥೆಯ ಕಾರ್ಯುಧ್ಯಕ್ಷ ರಾಜಾ ದೇಸಾಯಿ ಮಾತನಾಡಿ, ಭಗವದ್ಗೀತೆ ಪಠಣ ಮಕ್ಕಳಲ್ಲಿ ಜ್ಞಾನದ ಬೆಳಕನ್ನು ನೀಡುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಭಗವದ್ಗೀತಾ ಅಭಿಯಾನದ ಕಾರ್ಯುಧ್ಯಕ್ಷ ಎ.ಸಿ ಗೋಪಾಲ, ಭಗವದ್ಗೀತಾ ಅಭಿಯಾನದ ಮಹತ್ವ ವಿವರಿಸಿದರು. ಸಮಿತಿ ಪದಾಧಿಕಾರಿಗಳಾದ ಸುದರ್ಶನ ಹೇಮಾದ್ರಿ, ಶಿವರಾಮ ಹೆಗಡೆ ಹಿತ್ಲಳ್ಳಿ, ಶ್ರೀಕಾಂತ ಹೆಗಡೆ, ಅಭಿಯಾನದ ಸದಸ್ಯರಾದ ಮನೋಹರ ಪರ್ವತಿ, ಅಶೋಕ ಹೆಗಡೆ, ನಾಗಪತಿ ಹೆಗಡೆ ಹಾಗೂ ಇತರರು ಉಪಸ್ಥಿತರಿದ್ದರು.

ಅರವಿಂದ ಮುತ್ತಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀಣಾ ಶಿವರಾಮ ಹೆಗಡೆ ಭಗವದ್ಗೀತೆಯ ಹನ್ನೊಂದನೇ ಅಧ್ಯಾಯದ ಶೊ್ಲೕಕಗಳನ್ನು ಮಕ್ಕಳಿಗೆ ಹೇಳಿಕೊಟ್ಟರು. ಸುಮಾರು 200 ವಿದ್ಯಾರ್ಥಿಗಳು ಭಗವದ್ಗೀತಾ ಪಠಣದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net