ಧಾರ್ಮಿಕ ಶಿಕ್ಷಣದಿಂದ ಬುದ್ಧಿ ವಿಕಸನ

shibira
ವಿಪ್ರ ಬಾಲಕ, ಬಾಲಕಿಯರ ಧಾರ್ಮಿಕ ಶಿಕ್ಷಣ ಶಿಬಿರಕ್ಕೆ ಚಾಲನೆ ನೀಡಲಾಯಿತು.
Published on

ಹೆಬ್ರಿ: ಧಾರ್ಮಿಕ ಶಿಕ್ಷಣ ಪಡೆಯುವ ವ್ಯಕ್ತಿ ಸುಸಂಸ್ಕೃತನಾಗಿ ಆದರ್ಶ ಸಮಾಜದ ನಿರ್ಮಾಣಕ್ಕೆ ಕಾರಣನಾಗುತ್ತಾನೆ. ಇದರಿಂದ ನಮ್ಮ ಬುದ್ಧಿ ಮತ್ತು ಮನಸ್ಸು ವಿಕಸನಗೊಳ್ಳುತ್ತದೆ ಎಂaದು ಶ್ರೀನಿವಾಸ ಬಾಯರಿ ಬೆಪ್ಡೆ ಹೇಳಿದರು.

ಗಿಲ್ಲಾಳಿ ಶ್ರೀ ವಿಶ್ವೇಶಕೃಷ್ಣ ಗೋಶಾಲೆಯಲ್ಲಿ ವ್ಯವಸ್ಥಾಪನಾ ಸಮಿತಿ ಸಹಕಾರದೊಂದಿಗೆ ಆಯೋಜಿಸಲಾದ 19ನೇ ವರ್ಷದ ವಿಪ್ರ ಬಾಲಕ, ಬಾಲಕಿಯರ ಧಾರ್ಮಿಕ ಶಿಕ್ಷಣ ಶಿಬಿರದಲ್ಲಿ ಮಾತನಾಡಿದರು.

ಹೆಬ್ರಿ ಬ್ರಾಹ್ಮಣ ಸಂಘ ಅಧ್ಯಕ್ಷ ರಾಮಕೃಷ್ಣ ಆಚಾರ್ಯ ಶುಭಹಾರೈಸಿದರು. ಖಂಡಿಗ ಗೋಪಾಲಕೃಷ್ಣ ಜೆನ್ನಿ, ಗೋಶಾಲೆ ಟ್ರಸ್ಟಿಗಳಾದ ವಿಷ್ಣುಮೂರ್ತಿ ಆಚಾರ್ಯ, ಲಕ್ಷ್ಮಣ ಭಟ್, ಪದ್ಮನಾಭ ಆಚಾರ್ಯ, ಡಾ.ಭಾರ್ಗವಿ ಆರ್.ಐತಾಳ್, ಡಾ.ರಾಮಚಂದ್ರ ಐತಾಳ್, ಶ್ರೀಧಾಮ ಆಚಾರ್ಯ, ವಿಷ್ಣು ಆಚಾರ್ಯ, ಶ್ರೀವಾಸ ಆಚಾರ್ಯ ಉಪಸ್ಥಿತರಿದ್ದರು. ಪದ್ಮನಾಭ ಆಚಾರ್ಯ ಸ್ವಾಗತಿಸಿದರು. ವೇದವ್ಯಾಸ ತಂತ್ರಿ ಮಡಾಮಕ್ಕಿ ನಿರೂಪಿಸಿದರು. ಶಿಬಿರ 10 ದಿನಗಳ ಕಾಲ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net