ಸಮಗ್ರ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ

2Manju6_web
ಬೆಳಗಾವಿ ನಗರದ ಎಪಿಎಂಸಿ ಆವರಣದಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಪರವಾಗಿ ಪುತ್ರಿ ಶ್ರದ್ಧಾ ಶೆಟ್ಟರ್ ಮತಯಾಚನೆ ಮಾಡಿದರು. ಸರೋಜಿ ನಡುವಿನಹಳ್ಳಿ, ಶಶಿಭೂಷಣ ಪಾಟೀಲ, ಈರಯ್ಯ ಖೋತ, ಪಾಂಡುರಂಗ ದಾಮಣೇಕರ್ ಇತರರಿದ್ದರು.
Published on

ಬೆಳಗಾವಿ: ಇಲ್ಲಿನ ಎಪಿಎಂಸಿಯನ್ನು ಸಮಗ್ರ ಅಭಿವೃದ್ಧಿ ಪಡಿಸಿ ಮಾದರಿ ಮಾರುಕಟ್ಟೆಯನ್ನಾಗಿಸಲು ಎಲ್ಲ ಮತದಾರರು ಬಿಜೆಪಿ ಅಭ್ಯರ್ಥಿಗೆ ಮತ ನೀಡಬೇಕು ಎಂದು ದಿ.ಸುರೇಶ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ವಿನಂತಿಸಿದರು.

ನಗರದ ಎಪಿಎಂಸಿ ಆವರಣದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಪರವಾಗಿ ಶುಕ್ರವಾರ ಮತಯಾಚಿಸಿದ ಅವರು, ಮಾರುಕಟ್ಟೆ ಅಭಿವೃದ್ಧಿಗಾಗಿ ದಿ. ಅಂಗಡಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಪ್ರಯತ್ನಿಸಿ, ಕೆಲ ಯೋಜನೆಗಳನ್ನೂ ಆರಂಭಿಸಿದ್ದರು. ಇದೀಗ ಅವುಗಳನ್ನು ಮುಂದುವರಿಸಲು ಈ ಚುನಾವಣೆಯಲ್ಲಿ ಬಿಜೆಪಿಗೆ ಆಶೀರ್ವಾದ ಮಾಡಬೇಕು ಎಂದು ವಿನಂತಿಸಿದರು.

ರೈಲ್ವೆಖಾತೆ ರಾಜ್ಯ ಸಚಿವರಾಗಿದ್ದ ದಿ. ಅಂಗಡಿ, ಜಿಲ್ಲೆ ಹಾಗೂ ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅಲ್ಲದೆ, ಅವರು ಕೈಗೊಂಡಿದ್ದ ಎಲ್ಲ ಅಭಿವೃದ್ಧಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದು ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ತಾಯಿ ಮಂಗಲ ಅಂಗಡಿ ಅವರನ್ನು ಮತದಾರರು ಬೆಂಬಲಿಸಿ, ಪ್ರಚಂಡ ಬಹುಮತದಿಂದ ಆರಿಸಿ ತರಬೇಕು ಎಂದು ಶ್ರದ್ಧಾ ಶೆಟ್ಟರ್ ಮನವಿ ಮಾಡಿದರು.

ಸರೋಜಿನಿ ನಡುವಿನಹಳ್ಳಿ, ಶಶಿಭೂಷಣ ಪಾಟೀಲ, ಈರಯ್ಯ ಖೋತ, ಪಾಂಡುರಂಗ ದಾಮಣೇಕರ್, ಮಲ್ಲಿಕಾರ್ಜುನ ಸತ್ತಿಗೇರಿ, ಉಮೇಶ ಹಿರೇಮಠ, ದಿನೇಶ ವಾಳ್ವೇಕರ, ಗಜಾನನ ನಂದಗಡಕರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net