ಬೆಮೆಲ್​ ಬಳಿ ಇಂಟಿಗ್ರೇಟೆಡ್​ ಟೌನ್​ಶಿಪ್​

19 webb
Published on

ಬೆಮೆಲ್​ ನಗರ ಸಮೀಪದ 294 ಎಕರೆ ಜಾಗ ಪರಿಶೀಲಿಸಿದ ಸಚಿವ ಬೈರತಿ ಸುರೇಶ್​

ಕೆಜಿಎಫ್​-: ಬೆಮೆಲ್​ ನಗರದ ಬಳಿಯಿರುವ 294 ಎಕರೆ ಜಾಗದಲ್ಲಿ ಇಂಟಿಗ್ರೇಟೆಡ್​ ಟೌನ್​ಶಿಪ್​ ನಿಮಾರ್ಣ ಮಾಡಲು ಯೋಜನೆ ರೂಪಿಸಿದ್ದು, ನಗರಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್​ ಅವರು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ಚೆನ್ನೆ$ ಎಕ್ಸ್​ಪ್ರೆಸ್​ ಹೈವೇ ಪಕ್ಕದಲ್ಲಿರುವ 294 ಎಕರೆ ಇಂಟಿಗ್ರೇಟೆಡ್​ ಟೌನ್​ಶಿಪ್​ಪ್ರದೇಶಕ್ಕೆ ಎಕ್ಸ್​ಪ್ರೆಸ್​ ಹೈವೆಯಿಂದ ನೇರವಾಗಿ 30 ಅಡಿ ರಸ್ತೆ ನಿರ್ಮಿಸಲು ಅಗತ್ಯವಾದ 11 ಎಕರೆ ಸರ್ಕಾರಿ ಗೋಮಾಳ ಜಾಗ ಉಪಯೋಗಿಸಿಕೊಂಡು ಸಮಗ್ರ ನೀಲಿ ನಕ್ಷೆ ತಯಾರಿಸುವಂತೆ ತಹಸೀಲ್ದಾರ್​ಗೆ ಸೂಚಿಸಿದರು.
294 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿರುವ ಇಂಟಿಗ್ರೇಟೆಡ್​ ಟೌನ್​ಶಿಪ್​ ಜಾಗದಲ್ಲಿ ಮರಗಿಡಗಳ ತೆರವು, ರಸ್ತೆ, ನಿಮಾರ್ಣ, ವಾಣಿಜ್ಯ ಕಟ್ಟಡದ ನಿವೇಶನಗಳ ವಿಂಗಡಣೆ ಹಾಗೂ ಇನ್ನಿತರ ಕಾಮಗಾರಿಗಳಿಗೆ ನಗರಾಭಿವೃದ್ಧಿ ಇಲಾಖೆಯಿಂದ ಅಗತ್ಯವಿರುವ ಅನುದಾನ ಬಿಡುಗಡೆಗೊಳಿಸಿ ಟೌನ್​ಶಿಪ್​ ನಿಮಾರ್ಣ ಮಾಡಲಾಗುವುದೆಂದು ತಿಳಿಸಿದರು.

ಈ ಯೋಜನೆಯಲ್ಲಿ ಜನತೆಗೆ ಉತ್ತಮ ಮೂಲ ಸೌಲಭ್ಯ, ಆರಾಮದಾಯಕ ವಾಸಸ್ಥಳ ಮತ್ತು ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ಒದಗಿಸಲು ಉದ್ದೇಶಿಸಲಾಗಿದ್ದು, ಈ ಟೌನ್​ಶಿಪ್​ ಯೋಜನೆ ಅತ್ಯಾಧುನಿಕ ಮೂಲ ಸೌಲಭ್ಯಗಳೊಂದಿಗೆ ವಾಣಿಜ್ಯ ಕೇಂದ್ರಗಳು, ಶಿಕ್ಷಣ ಮತ್ತು ಆರೋಗ್ಯ ಸೇವೆಗಳು, ಉದ್ಯಾನವನಗಳು ಮತ್ತು ಪರಿಸರ ಸ್ನೇಹಿ ವಸತಿ ಸೌಲಭ್ಯಗಳು ಒಳಗೊಂಡಿರುತ್ತವೆ ಎಂದು ತಿಳಿಸಿದರು. ಸಮಗ್ರ ಟೌನ್​ಶಿಪ್​ ಯೋಜನೆಯಲ್ಲಿ ಉದ್ಯೋಗಾವಕಾಶ ಹಾಗೂ ಸಮುದಾಯದ ಸಾಂಸತಿಕ ಮತ್ತು ಸಾಮಾಜಿಕ ಜೀವನ ಶೈಲಿ ಉತ್ತೇಜಿಸಲು ಯೋಜಿಸಲಾಗಿದ್ದು, ಯೋಜನೆಯು ಕೆಜಿಎಫ್​, ಬಂಗಾರಪೇಟೆ ಎರಡು ತಾಲೂಕುಗಳ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದ್ದು, ಕಲ್ಯಾಣ ಕಾರ್ಯಕ್ರಮ ಪ್ರಾರಂಭಿಸುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net