ಪ್ರಾದೇಶಿಕ ಕೇಂದ್ರೀಯ ಸಮಗ್ರ ಪೀಡೆ ನಿರ್ವಹಣಾ ಕೇಂದ್ರದಿಂದ ಸಮಗ್ರ ಕೀಟ ನಿರ್ವಹಣೆ ತರಬೇತಿ

28
Published on

ಮೈಸೂರು: ಪ್ರಾದೇಶಿಕ ಕೇಂದ್ರೀಯ ಸಮಗ್ರ ಪೀಡೆ ನಿರ್ವಹಣಾ ಕೇಂದ್ರ, ಬೆಂಗಳೂರು, ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಐದು ದಿನಗಳ ಕಾಲ ಸಮಗ್ರ ಕೀಟ ನಿರ್ವಹಣೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಮಗ್ರ ಮತ್ತು ಸುಸ್ಥಿರ ವಿಧಾನಗಳ ಮೂಲಕ ಕೃಷಿ ಕೀಟಗಳನ್ನು ನಿರ್ವಹಿಸುವಲ್ಲಿ ಜ್ಞಾನ ಮತ್ತು ಪ್ರಾಯೋಗಿಕ ಕೌಶಲಗಳನ್ನು ಹೆಚ್ಚಿಸುವ ಕುರಿತು ತರಬೇತಿ ಕಾರ್ಯಕ್ರಮವನ್ನು ಇತ್ತೀಚೆಗೆ ಬೆಂಗಳೂರಿನ ಆರ್‌ಸಿಐಪಿಎಂಸಿಯ ಜಂಟಿ ನಿರ್ದೇಶಕ (ಇ) ಡಾ.ಎ.ಸಿದ್ದಿಕಿ ಹಾಗೂ ಮೈಸೂರಿನ ಡಿಎಟಿಸಿಯ ಉಪ ಕೃಷಿ ನಿರ್ದೇಶಕ ಡಾ.ಬಿ.ಎನ್.ಧನಂಜಯ ಉದ್ಘಾಟಿಸಿ, ಸುಸ್ಥಿರ ಕೃಷಿ ಪದ್ಧತಿಗಳನ್ನು ಖಚಿತಪಡಿಸಿಕೊಳ್ಳುವಲ್ಲಿ ಸಮಗ್ರ ಕೀಟ ನಿರ್ವಹಣೆಯ ಮಹತ್ವವನ್ನು ತಿಳಿಸಿಕೊಟ್ಟರು.
ತರಬೇತಿಯನ್ನು ತೋಟಗಾರಿಕಾ ಮಹಾವಿದ್ಯಾಲಯದ ಮೈಸೂರು ಡೀನ್ ಡಾ.ರಾಮೇಗೌಡ ಅವರು ಸಂಯೋಜಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಸುನೀತಾ ಪಾಂಡೆ, ಡಾ. ಜಿ.ಟಿ.ಜಯಸಿಂಹ, ದಿವ್ಯಾ, ಡಾ. ವಿನಯ್, ಆನಂದಿ, ಎಸ್. ಫರಿದಾಬಾದ್, ಡಾ.ಡಿ.ಕೆ.ನಾಗರಾಜು, ಡಾ.ಗುಬ್ಬಯ್ಯ ಇತರರು ಭಾಗವಹಿಸಿ ವಿವಿಧ ವಿಷಯ ಮಂಡಿಸಿದರು.
ತರಬೇತಿ ಕಾರ್ಯಕ್ರಮದಲ್ಲಿ ಕರ್ನಾಟಕದಾದ್ಯಂತ ಕೃಷಿ ಮತ್ತು ತೋಟಗಾರಿಕೆ ರಾಜ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. ತರಬೇತಿ ಅವಧಿಯಲ್ಲಿ ಕ್ಷೇತ್ರ ಪ್ರಾತ್ಯಕ್ಷಿಕೆ ಸಹ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net