ಗರಿಗೆದರಿದ ಕೃಷಿ ಚಟುವಟಿಕೆಗಳು

ಗದ್ದೆ ನಾಟಿ ಕಾರ್ಯಕ್ಕೆ ಜಮೀನನ್ನು ಹಸನು ಮಾಡುತ್ತಿರುವುದು.
Published on

ಆಲ್ದೂರು: ಇಲ್ಲಿನ ಸುತ್ತಮುತ್ತ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರು ಗದ್ದೆ ನಾಟಿ ಕಾರ್ಯಕ್ಕೆ ಜಮೀನನ್ನು ಹಸನು ಮಾಡಿಕೊಳ್ಳುತ್ತಿದ್ದು, ಗದ್ದೆಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡು ಬರುತ್ತಿದೆ. ಕಳೆದ 15 ದಿನಗಳ ಹಿಂದೆ ಬಿಸಿಲಿನ ಝಳಕ್ಕೆ ತತ್ತರಿಸಿದ್ದ ಜನತೆಗೆ, ಕಳೆದ ಒಂದು ವಾರದಿಂದ ವರುಣ ತಂಪೆರೆದಿದ್ದಾನೆ. ಮುಂಗಾರು ಮಳೆ ಆರಂಭವಾಗಲು ಇನ್ನೂ ಸಮಯವಿದೆ. ಚಂಡಮಾರುತದ ಪರಿಣಾಮದಿಂದ ಕಳೆದ ವಾರದಿಂದ ಮಳೆಯಾಗುತ್ತಿದ್ದು ಕಾಫಿ ತೋಟ ಹಾಗೂ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net