'ಕನಕದಾಸರ ತತ್ವ, ಆದರ್ಶ ಮೈಗೂಡಿಸಿಕೊಳ್ಳಿ'

42
Published on

ಮೈಸೂರು: ಕನಕದಾಸರು 15ನೇ ಶತಮಾನದಲ್ಲಿಯೇ ತಮ್ಮ ಸಾಹಿತ್ಯದ ಮೂಲಕ ಜನರಲ್ಲಿ ಜಾತಿ ವ್ಯವಸ್ಥೆ ವಿರುದ್ಧ ಜಾಗೃತಿ ಮೂಡಿಸಿದ ಮಹಾಪುರುಷ ಎಂದು ಶ್ರೀರಾಂಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬುಲೆಟ್ ಮಹಾದೇವ್ ತಿಳಿಸಿದರು.
ಶ್ರೀರಾಂಪುರದ ಅಶ್ವಿನಿ ಕಲ್ಯಾಣ ಮಂಟಪದಲ್ಲಿ ಮಹಾದೇವಪುರದ ಶ್ರೀ ಕಾಗಿನೆಲೆ ಡೆವಲಪ್‌ಮೆಂಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್‌ನಿಂದ ಇತ್ತೀಚೆಗೆ ಆಯೋಜಿಸಿದ್ದ ಕನಕ ಜಯಂತಿ ಉದ್ಘಾಟಿಸಿ 2024ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು.
ಕನಕದಾಸರು ಶಿಕ್ಷಣ ಕಲಿತಿದ್ದರಿಂದ ನಳಚರಿತ್ರೆ, ರಾಮಧಾನ್ಯಚರಿತ್ರೆ, ಹರಿಭಕ್ತಸಾರ, ಕೀರ್ತನೆಗಳನ್ನು ಬರೆದು ಜನರಲ್ಲಿ ಜಾಗೃತಿ ಮೂಡಿಸಿದರು. ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಶಿಕ್ಷಣ ಯಾರು ಕದಿಯಲಾರದ ವಸ್ತುವಾಗಿದ್ದು, ಜ್ಞಾನವಿದ್ದರೆ ಎಲ್ಲಿಯಾದರೂ ಬದುಕಬಹುದು. ಕನಕದಾಸರ ತತ್ವ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಸಮಿತಿಯ ಉಪಾಧ್ಯಕ್ಷ ಎಸ್.ಕೆ.ರಾಮೇಗೌಡ, ನಿರ್ದೇಶಕರಾದ ಕೆ.ಎಚ್.ಕುಮಾರ್, ಬಿ. ಸತೀಶ್, ಶಿವಕುಮಾರ್, ಸೋಮಣ್ಣ, ಆರ್.ಗುರುರಾಜ್, ಜಿ.ರಘುಕುಮಾರ್, ಕೆ.ಸುರೇಶ್, ಶಿವಮ್ಮ, ವಾಣಿಶ್ರೀ, ಅಶ್ವಿನಿ ರೇವಣ್ಣ, ಶಂಕರ್ ಧನಗಳ್ಳಿ ಬಸವರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net