ಪರ್ಮಿಟ್ ಇಲ್ಲದ ವಾಹನಕ್ಕೆ ವಿಮಾ ಪರಿಹಾರ ನಿರಾಕರಿಸುವಂತಿಲ್ಲ - ದ.ಕ. ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ನ್ಯಾಯಾಲಯ ಆದೇಶ

Published on

ಪುತ್ತೂರು: ವಿಮಾ ಅವಧಿಯಲ್ಲಿ ಸಾರಿಗೆ ವಾಹನಕ್ಕೆ ಸೂಕ್ತ ರಹದಾರಿ ಪರವಾನಗಿ ಇಲ್ಲದೆ ಅಪಘಾತವಾದರೆ, ವಿಮಾ ಪರಿಹಾರವನ್ನು ನೀಡಲು ಕಂಪನಿ ನಿರಾಕರಿಸಿದರೆ ಸೇವಾ ನ್ಯೂನತೆ ಆಗುತ್ತದೆ ಎಂದು ಮಂಗಳೂರು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ನ್ಯಾಯಾಲಯ ಆದೇಶಿಸಿದೆ.

ಸಾಗರ ತಾಲೂಕಿನ ಗ್ರಾಹಕ ಇಕೋ ಕಾರಿಗೆ ಖಾಸಗಿ ವಿಮಾ ಕಂಪನಿಯಲ್ಲಿ ೨೦೨೩ರ ಜೂನ್ ನಲ್ಲಿ ವಾಹನ ವಿಮೆ ಮಾಡಿಸಿದ್ದು, ಅದೇ ವರ್ಷದ ಅಕ್ಟೋಬರಲ್ಲಿ ಕಾರು ಅಪಘಾತಕ್ಕೀಡಾಗಿ ಸಂಪೂರ್ಣ ಹಾನಿಗೊಂಡಿದೆ. ವಿಮಾ ಕಂಪನಿಯ ಸರ್ವೇಯರ್ ಕಾರಿನ ದುರಸ್ತಿಗೆ ಅದರ ಮೌಲ್ಯಕ್ಕಿಂತಲೂ ಹೆಚ್ಚು ದುರಸ್ತಿಗೆ ಖರ್ಚಾಬಹುದು ಮತ್ತು ಅಪಘಾತದ ದಿನದಂದು ಕಾರಿಗೆ ಸಾರ್ವಜನಿಕ ರಸ್ತೆಯಲ್ಲಿ ಓಡಾಡಲು ಸೂಕ್ತ ರಹದಾರಿ ಪರವಾನಗಿ ಇರಲಿಲ್ಲವೆಂದು ವರದಿ ನೀಡಿದರು. ಗ್ರಾಹಕ ವಿಮಾ ಕಂಪನಿಗೆ ವಿಮಾ ಪರಿಹಾರಕ್ಕಾಗಿ ಕೋರಿಕೆ ಸಲ್ಲಿಸಿದ್ದು, ವಿಮಾ ಕಂಪನಿಯವರು, ಅಪಘಾತದ ದಿನದಂದು ಪರವಾನಗಿ ಇರಲಿಲ್ಲವೆಂದೂ, ಪರವಾನಗಿ ನವೀಕರಣಗೊಳ್ಳದೆ ವಿಮಾ ಪರಿಹಾರಕ್ಕೆ ಅರ್ಹರಲ್ಲವೆಂದು ಕೋರಿಕೆಯನ್ನು ತಿರಸ್ಕರಿಸಿತ್ತು.

ಅಪಘಾತದ ಅವಽಯದಲ್ಲಿ ವಾಹನಕ್ಕೆ ವಿಮಾ ಪಾಲಿಸಿ ಚಾಲ್ತಿಯಲ್ಲಿದ್ದು, ಸಾರಿಗೆ ನಿಯಮಗಳನ್ನು ಉಲ್ಲಂಘನೆ ಮಾಡದಿದ್ದರೂ ವಿಮಾ ಕಂಪನಿಯವರ ವಿಮಾ ತಿರಸ್ಕೃತ ನಿರ್ಧಾರ ಗ್ರಾಹಕ ಸೇವಾ ನ್ಯೂನತೆ ಆಗುತ್ತದೆ ಮತ್ತು ಸೂಕ್ತ ಪರಿಹಾರಕ್ಕಾಗಿ ಆದೇಶಿಸಬೇಕೆಂದು ಮಂಗಳೂರಿನ ದ.ಕ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ನ್ಯಾಯಾಲಯದಲ್ಲಿ ವಿಮಾ ಕಂಪನಿ ವಿರುದ್ಧ ವಕೀಲ ಮನೋಹರ್ ಪಿ.ವಿಟ್ಲ ಮೂಲಕ ಮೊಕದ್ದಮೆ ಸಲ್ಲಿಸಿದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ವಿಮಾ ಅವಧಿಯಲ್ಲಿ ವಾಹನಕ್ಕೆ ಸೂಕ್ತ ರಹದಾರಿ ಪರವಾನಗಿ ಇಲ್ಲದಿದ್ದರೂ, ವಾಹನ ಅಪಘಾತವಾದರೆ, ವಿಮಾ ಕಂಪನಿ ವಿಮಾ ಪರಿಹಾರ ನೀಡಲು ಭಾದ್ಯಸ್ಥರೆಂದು ತೀರ್ಪು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net