ದೇಶದ ಆರ್ಥಿಕತೆಯಲ್ಲಿ ಎಲ್​ಐಸಿ ಪಾತ್ರ ಅಪಾರ

udp-1-lic
Published on

ಉಡುಪಿ: ಭಾರತೀಯರ ವಿಮಾ ರಕ್ಷಣೆ ಜೊತೆಗೆ ಮೂಲಭೂತ ಸೌಕರ್ಯ ವೃದ್ಧಿಯಲ್ಲಿ ಭಾರತೀಯ ಜೀವವಿಮಾ ನಿಗಮ ಕೊಡುಗೆ ಅಪಾರವಾಗಿದೆ ಎಂದು ಎಲ್​ಐಸಿ ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿ ಗಣಪತಿ ಎನ್​. ಭಟ್​ ಹೇಳಿದರು.

ಸೋಮವಾರ ಅಜ್ಜರಕಾಡು ಎಲ್​ಐಸಿ ಕಚೇರಿಯಲ್ಲಿ 69ನೇ ವಿಮಾ ಸಪ್ತಾಹ ಉದ್ಘಾಟಿಸಿ ಮಾತನಾಡಿದರು. ಕಳೆದ ಏಳು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಎಲ್​ಐಸಿ ದೇಶದ ನಂ.1 ವಿಶ್ವಾಸಾರ್ಹ ವಿಮಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು. ಕರ್ಣಾಟಕ ಬ್ಯಾಂಕ್​ ಎಜಿಎಂ ವಾದಿರಾಜ ಭಟ್​ ಮತ್ತು ಆಕ್ಸಿಸ್​ ಬ್ಯಾಂಕ್​ ಕ್ಲಸ್ಟರ್​ ಹೆಡ್​ ಸುರೇಶ್​ ಶುಭ ಹಾರೈಸಿದರು. ಮಾರುಕಟ್ಟೆ ಪ್ರಬಂಧಕ ಬಿಜು ಜೋಸೆಫ್​ ಸ್ವಾಗತಿಸಿದರು. ಉಪಪ್ರಬಂಧಕ ಶ್ಯಾಮಸುಂದರ್​ ವಂದಿಸಿದರು. ಶರತ್​ ಕುಮಾರ್​ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net