ಇಂದಿನಿಂದ ವಿಮಾ ಸಪ್ತಾಹ ಆಚರಣೆ

Insurance, week, celebration
Published on

ಹೊನ್ನಾಳಿ: ತಾಲೂಕು ಜೀವ ವಿಮಾ ಕಂಪನಿ ಕಚೇರಿಯಲ್ಲಿ ಸೆ. 1ರಂದು ಬೆಳಗ್ಗೆ 10ಕ್ಕೆ ವಿಮಾ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೊನ್ನಾಳಿಯ ಎಲ್‌ಐಸಿ ಶಾಖಾಧಿಕಾರಿ ಬಾಲಚಂದ್ರ ಕೆ. ಹಂದಿಗೋಳ್ ತಿಳಿಸಿದರು.

ಪ್ರತಿ ವರ್ಷ ಸೆ. 1ರಿಂದ 7ರ ವರೆಗೆ ಎಲ್‌ಐಸಿಯಿಂದ ವಿಮಾ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ಅದರಂತೆ ಹೊನ್ನಾಳಿ ಎಲ್‌ಐಸಿ ಶಾಖೆಯಲ್ಲಿ ಆಯೋಜಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಶುಕ್ರವಾರ ಜೀವವಿಮಾ ಜನಜಾಗೃತಿಗಾಗಿ ಬೈಕ್ ರ‌್ಯಾಲಿ, 3ರಂದು ಪ್ರಾಥಮಿಕ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಎಲ್‌ಐಸಿ ನೌಕರರಿಗಾಗಿ 4ರಂದು ವಿವಿಧ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು, 5ರಂದು ಗುರುವಂದನಾ, ಡಾ. ಸರ್ವಪಲ್ಲಿ ರಾಧಾಕೃಷ್ಣ ಜನ್ಮದಿನಾಚರಣೆ, 6ರಂದು ಪ್ರತಿನಿಧಿಗಳಿಗೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸೆ. 7ರಂದು ಸಂಜೆ 4 ಗಂಟೆಗೆ ವಿಮಾ ಸಪ್ತಾಹದ ಸಮಾರೋಪ ಆಯೋಜಿಸಲಾಗಿದೆ. ಅಂದು ಉಪನ್ಯಾಸ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.

ವಿಮಾ ಪ್ರತಿನಿಧಿ ಶಕೀಲ್ ಅಹಮ್ಮದ್ ಮಾತನಾಡಿದರು. ಹೊನ್ನಾಳಿ ಶಾಖೆ ಉಪಶಾಖಾಧಿಕಾರಿ ಪಿ.ಎಸ್. ಸ್ವಾಮಿ, ಆಡಳಿತಾಧಿಕಾರಿ ಸಿ.ಎನ್. ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net