ಕಾರ್ಮಿಕ ಇಲಾಖೆಗೆ ವಿಜಯವಾಣಿ ಸಹಯೋಗ; ಪತ್ರಿಕಾ ವಿತರಕರಿಗೆ ವಿಮೆ ನೋಂದಣಿ

12 Dwd 1
Published on

ಧಾರವಾಡ: ರಾಜ್ಯ ಸರ್ಕಾರ ಪತ್ರಿಕಾ ವಿತರಕರಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಿದೆ. ಇದರ ಸೌಲಭ್ಯ ಪಡೆಯಲು `ವಿಜಯವಾಣಿ' ಪತ್ರಿಕೆಯು ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ಇ- ಶ್ರಮ್ ಕಾರ್ಡ್ ಮಾಡಿಸುವ ವ್ಯವಸ್ಥೆ ಮಾಡಿತ್ತು.
ನಗರದ ವಿಜಯವಾಣಿ ಕಚೇರಿಯಲ್ಲಿ ಶುಕ್ರವಾರ ಇ- ಶ್ರಮ್ ಕಾರ್ಡ್ ನೋಂದಣಿ ಕಾರ್ಯ ನಡೆಯಿತು. ಹುಬ್ಬಳ್ಳಿಯ ಸಹಾಯಕ ಕಾರ್ಮಿಕ ಆಯುಕ್ತೆ ಶ್ವೇತಾ ಎಸ್. ಹಾಗೂ ಹುಬ್ಬಳ್ಳಿ ಉಪ ವಿಭಾಗದ ಕಾರ್ಮಿಕ ಇಲಾಖೆ ಅಽಕಾರಿಗಳಾದ ಲಲಿತಾ ಸಾತೇನಹಳ್ಳಿ, ಮಾರಿಕಾಂಬಾ ಹುಲಕೋಟಿ ಮತ್ತು ಹಿರಿಯ ಕಾರ್ಮಿಕ ನಿರೀಕ್ಷಕಿ ಭುವನೇಶ್ವರಿ ಕೋಟಿಮಠ ಮಾರ್ಗದರ್ಶನದಲ್ಲಿ ನೋಂದಣಿ ಕಾರ್ಯ ನಡೆಯಿತು.
ಧಾರವಾಡ ೨ನೇ ವೃತ್ತದ ಹಿರಿಯ ಕಾರ್ಮಿಕ ನಿರೀಕ್ಷಕಿ ಮೀನಾಕ್ಷಿ ಶಿಂಽಹಟ್ಟಿ ನೋಂದಣಿಗೆ ಚಾಲನೆ ನೀಡಿದರು. ನಗರದ ೫೦ಕ್ಕೂ ಹೆಚ್ಚು ಪತ್ರಿಕೆ ವಿತರಕರು ಇ- ಶ್ರಮ್ ಕಾರ್ಡ್ಗೆ ನೋಂದಣಿ ಮಾಡಿಸಿಕೊಂಡರು. ಸ್ಥಳದಲ್ಲೇ ಇ- ಶ್ರಮ್ ಕಾರ್ಡ್ಗಳನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net