

ಬೆಳಗಾವಿ: ಮುಂಗಾರು ಹಂಗಾಮಿಗೆ 2023- 24ನೇ ಸಾಲಿನ ಬೆಳಗಾವಿ ತಾಲೂಕಿನ ರೈತರಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ ತಾಲೂಕಿನ ಕಾಕತಿ, ಉಚಗಾಂವ ಮತ್ತು ಬೆಳಗಾವಿ ಹೋಬಳಿಗಳಿಗೆ ಆಲೂಗಡ್ಡೆ ಮಳೆಯಾಶ್ರಿತ ಮತ್ತು ಕೇವಲ ಕಾಕತಿ ಹೋಬಳಿಗೆ ಟೊಮ್ಯಾಟೊ ಬೆಳೆಗೆ ಅಧಿಸೂಚನೆಯಾಗಿದೆ. ಆಲೂಗಡ್ಡೆ ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 1,445 ರೂ., ಟೊಮ್ಯಾಟೊ ಬೆಳೆಗೆ 4,457 ರೂ. ರೈತರ ವಂತಿಕೆಯ ವಿಮಾ ಕಂತು ನಿಗದಿಯಾಗಿದೆ. ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ತಾಲೂಕಿಗೆ ಮಾವು ಬೆಳೆ ಅಧಿಸೂಚನೆಗೊಂಡಿದೆ. ಮಾವು ಬೆಳೆಗೆ ಪ್ರತಿ ಹೆಕ್ಟರ್‌ಗೆ 4 ಸಾವಿರ ರೂ. ರೈತರ ವಂತಿಕೆಯ ವಿಮಾ ಕಂತು ನಿಗದಿಯಾಗಿದೆ. ಆದ್ದರಿಂದ ಆಸಕ್ತ ರೈತರು ಆಲೂಗಡ್ಡೆ ಮಳೆಯಾಶ್ರಿತ, ಟೊಮ್ಯಾಟೊ ಮತ್ತು ಮಾವು ಬೆಳೆಗೆ ಜು.31ರೊಳಗೆ ವಿಮೆ ಕಂತು ಪಾವತಿಸಲು ಹತ್ತಿರದ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಬಹುದು. ಮಾಹಿತಿಗೆ ತಾಲೂಕಿನ ಹೋಬಳಿ ಮಟ್ಟದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.