ವಿಮೆ ಯೋಜನೆ ಲಾಭ ಪಡೆಯಲಿ

15BLH8
Published on

ಬೆಲಹೊಂಗಲ: ಕೇಂದ್ರ ಸರ್ಕಾರದ ಯೋಜನೆಗಳಾದ ಪ್ರಧಾನಮಂತ್ರಿ ಜೀವನ್​ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನಮಂತ್ರಿ ಸುರಾ ಬಿಮಾ ಯೋಜನೆ ಲಾಭ ಪಡೆಯಲು 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ನೋಂದಣಿ ಮಾಡಿಕೊಳ್ಳಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ತಾಪಂ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಾ ಬಿಮಾ ಯೋಜನೆಯ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಜ.22ರಂದು ಬೆಳಗ್ಗೆ 10.30 ರಿಂದ ಸಂಜೆ 5 ಗಂಟೆ ವರೆಗೆ ಜೀವ ವಿಮೆಗೆ ನೋಂದಣಿ ಮಾಡಿಕೊಳ್ಳುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ತಾಪಂ ಅಥವಾ ಗ್ರಾಪಂ ಕಚೇರಿಯಲ್ಲಿ ಅಗತ್ಯ ದಾಖಲೆ ಸಲ್ಲಿಸಿ ಯೋಜನೆಯ ಲಾಭ ಪಡೆಯಬೇಕು ಎಂದರು.

ತಾಪಂ ಯೋಜನಾಧಿಕಾರಿ ರಾಜಶೇಖರ ಕಡೆಮನಿ ಮಾತನಾಡಿ, ಕುಟುಂಬದ ಸದಸ್ಯರು ಅಪಘಾತದಲ್ಲಿ ನಿಧನರಾದರೆ ಅಥವಾ ಅಂಗವೆಕಲ್ಯವಾದರೆ ಸರ್ಕಾರದಿಂದ ಹಣಕಾಸು ನೆರವು ದೊರಕಲಿದೆ ಎಂದರು. ವರ್ಷಕ್ಕೆ 436 ರೂ. ವಿಮೆ ತುಂಬಿದರೆ ಅಪಘಾತದಲ್ಲಿ ಮರಣ ಹೊಂದಿರುವ ಕುಟುಂಬಕ್ಕೆ 2 ಲ ರೂ., ಅಂಗವೈಕಲ್ಯವಾದರೆ 1 ಲ ರೂ. ನೆರವು ದೊರಕಲಿದೆ. ಇದು ಕೇಂದ್ರ ಸರ್ಕಾರದ ಮಹಾತ್ವಾಕಾಂ ಯೋಜನೆಯಾಗಿದ್ದು, ಸರ್ಕಾರಿ ಅಧಿಕಾರಿಗಳು ಹಾಗೂ ಕುಟುಂಬದ ಸದಸ್ಯರು, ಮತ್ತು ಎಲ್ಲ ನೌಕರರು ಈ ವಿಮೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸಹಾಯಕ ಕಷಿ ನಿರ್ದೇಶಕ ಬಸವರಾಜ ದಳವಾಯಿ ಮಾತನಾಡಿ, ಕೃಷಿಕ ಕುಟುಂಬಸ್ಥರು, ಉದ್ಯೋಗ ಖಾತ್ರಿ ಕೂಲಿಕಾರ್ಮಿಕರು, ಹೊರಗುತ್ತಿಗೆ ನೌಕರರು ವಿಮೆ ಮಾಡಿಸಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್​.ಎಸ್​. ಸಿದ್ದಣ್ಣವರ ಮಾತನಾಡಿದರು. ಕ್ಷೇತ್ರ ಶಿಣಾಧಿಕಾರಿ ಬಿ.ಎನ್​. ಪ್ಯಾಟಿ, ಸಹಾಯಕ ಲೆಕ್ಕಾಧಿಕಾರಿ ಪ್ರಶಾಂತ ಹಿರೇಮಠ, ಗ್ರಾಪಂ ಅಭಿವದ್ಧಿ ಅಧಿಕಾರಿಗಳು, ತಾಪಂ ಸಿಬ್ಬಂದಿ, ವಿವಿಧ ಬ್ಯಾಂಕ್​ ವ್ಯವಸ್ಥಾಪಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net