

ಹಂದನಕೆರೆ : ಹೋಬಳಿಯ ಮಲ್ಲಿಗೆರೆ ಹಾಲು ಉತ್ಪಾದಕ ಮಹಿಳಾ ಸಂಘದಲ್ಲಿ ತುಮುಲ್ ಸಹಯೋಗದಲ್ಲಿ ಕ್ಷೀರ ಸಂಜೀವಿನಿ ಯೋಜನೆ ಅಡಿ ಫಲಾನುಭವಿಗಳಿಗೆ ಚೆಕ್ ವಿತರಣಾ ಮತ್ತು ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಗೋಪೂಜೆ ಮಾಡುವ ಮೂಲಕ ತುಮುಲ್ ನಿರ್ದೇಶಕ ಬಿ.ಎನ್.ಶಿವಪ್ರಕಾಶ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ 1385 ಸಂಘಗಳಿದ್ದು, ಅದರಲ್ಲಿ ಮಹಿಳಾ ಸಂಘಗಳು 377 ಇವೆ. ಚಿಕ್ಕನಾಯಕನಹಲ್ಳಿ ತಾಲೂಕಿನಲ್ಲಿ 118 ಸಂಘಗಳಿವೆ, ಮಹಿಳಾ ಸಂಘಗಳು 23. ಮಹಿಳಾ ಸಂಘಗಳಲ್ಲಿ ಅತಿ ಹೆಚ್ಚು ಹಾಲು ಉತ್ಪಾದಿಸಿದ ಸಂಘ ಬೆಳ್ಳಾರದ ರಾಮನಗರ ಮತ್ತು 2ನೇ ಸ್ಥಾನದಲ್ಲಿ ಮಲ್ಲಿಗೆರೆ ಹಾಲು ಉತ್ಪಾದಕರ ಸಂಘವಿದೆ ಎಂದರು.
ಒಕ್ಕೂಟದಿಂದ ಕ್ಷೀರ ಸಂಜೀವಿನಿ ಯೋಜನೆಯಡಿ 6, 44,00 ಲಕ್ಷ ರೂ.ಗಳನ್ನು14 ಜನಕ್ಕೆ ನೀಡಿದ್ದೇವೆ. ಇನ್ನ ಮುಂದಿನ ವರ್ಷ ನೀವುಗಳು ಅತಿ ಹೆಚ್ಚು ಹಾಲು ಉತ್ಪಾದಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯಬೇಕು ಎಂದು ಆಶಿಸುತ್ತೇವೆ. ನಿಮ್ಮ ಸಂಘ ಸಾಲಿನಲ್ಲಿ 4,58,00 ರೂ. ಲಾಭ ಗಳಿಸಿದ್ದೀರಿ ಈ ಸಂಘವು ಉತ್ತಮ ಸ್ಥಾನದಲ್ಲಿದೆ ಇನ್ನು ಹೆಚ್ಚು ಹಾಲು ಉತ್ಪಾದಿಸಿ ಮೊದಲನೇ ಸ್ಥಾನಕ್ಕೆ ಬರಬೇಕು ಎಂದರು.
ಹಸುಗಳಿಗೆ ಇನ್ಶೂರೆನ್ಸ್ ಕಡ್ಡಾಯವಾಗಿ ಮಾಡಿಸಬೇಕು. ಹಸುಗಳ ಸತ್ತರೆ ರೈತರಿಗೆ 70 ಸಾವಿರ ರೂ. ಸಿಗುತ್ತದೆ. ಉತ್ಪಾದಕರ ಮಕ್ಕಳು ಇಂಜಿನಿಯರಿಂಗ್ ಮತ್ತು ಎಂಬಿಬಿಎಸ್ ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ನಮ್ಮ ಒಕ್ಕೂಟದಿಂದ ಸಹಾಯಧನ ನೀಡುತ್ತಿದ್ದೇವೆ ಮತ್ತು ಉತ್ಪಾದಕ ರೈತರು ಮರಣ ಹೊಂದಿದರೆ 50 ಸಾವಿರ ರೂ. ನೀಡುತ್ತಿದ್ದೇವೆ ಎಂದು ತಿಳಿಸಿದರು.
ಒಕ್ಕೂಟದ ಕ್ಷೀರ ಸಂಜೀವಿನಿ ನೋಡಲ್ ಅಧಿಕಾರಿ ಮಧು, ಸಂದ ಅಧ್ಯೆ ಛಾಯಾದೇವಿ, ಉಪಾಧ್ಯೆ ಶಕುಂತಲಾ, ಪುಷ್ಪಲತಾ, ವಿಸ್ತರಣಾಧಿಕಾರಿ ಮೋಹನ್ ಕುಮಾರ್, ಸಿದ್ದಲಿಂಗ ಸ್ವಾಮಿ , ಸಂಘದ ಕಾರ್ಯದರ್ಶಿ ಪುಷ್ಟ ಮತ್ತಿತರರು ಇದ್ದರು.