ನಾಟಿ ಹಸು, ಎಮ್ಮೆಗಳಿಗೂ ವಿಮೆ ಸೌಲಭ್ಯ

23 MADHUGIURI 1
Published on

ಮಧುಗಿರಿ: ಈ ಬಾರಿ ನಾಟಿ ಹಸುಗಳು ಮತ್ತು ಎಮ್ಮೆಗಳಿಗೂ ವಿಮೆ ಸೌಲಭ್ಯ ವಿಸ್ತರಿಸಲಾಗಿದ್ದು, ತಾಲೂಕಿನಲ್ಲಿರುವ 160 ಹಾಲು ಉತ್ಪಾದಕರ ಸಂಗಳ ಹಾಲು ಉತ್ಪಾದಕರು ರಾಸುಗಳಿಗೆ ವಿಮೆ ಮಾಡಿಸುವಂತೆ ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ತಿಳಿಸಿದರು.

ತಾಲೂಕಿನ ಶಂಭೋನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಂದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಾನುವಾರು ಗುಂಪು ವಿಮೆ ಕಾರ್ಯಕ್ರಮವನ್ನು ರಾಸುಗಳಿಗೆ ಕಿವಿಯೋಲೆ ಹಾಕುವ ಮೂಲಕ ಉದ್ಘಾಟಿಸಿದರು. 2019-20ರಲ್ಲಿ ತಾಲೂಕಿನ 9,495 ರಾಸುಗಳಿಗೆ ವಿಮೆ ಮಾಡಿದ್ದು, ಇದರಲ್ಲಿ 172 ರಾಸುಗಳು ಮರಣ ಹೊಂದಿದೆ, ಈ ಪೈಕಿ 149 ರಾಸುಗಳಿಗೆ 72.60 ಲಕ್ಷ ರೂ ವಿಮಾ ಹಣವನ್ನು ಹಾಲು ಉತ್ಪಾದಕರಿಗೆ ನೀಡಲಾಗಿದೆ. ಉಳಿದ 23 ರಾಸುಗಳ ಮಾಲೀಕರಿಗೆ 11.5 ಲಕ್ಷ ರೂ. ವಿಮಾ ಕಂಪನಿಯಿಂದ ಬರಬೇಕಿದೆ ಎಂದು ತಿಳಿಸಿದರು.

ಗರ್ಭಧರಿಸಿದ ಮಿಶ್ರತಳಿ ರಾಸು, ಉತ್ತಮ ಮಿಶ್ರತಳಿ ಹಸುಗಳಿಗೆ ಗರಿಷ್ಠ 60 ಸಾವಿರ, ಎಮ್ಮೆಗಳಿಗೆ 30 ಸಾವಿರ ರೂ.ವರೆಗೆ ಮೌಲ್ಯ ಆಧರಿಸಿ ವಿಮೆ ಮಾಡಿಸಬಹುದು. ಪಶುವೈದ್ಯರು ರಾಸಿನ ವಯಸ್ಸು, ತಳಿ, ಹಾಲಿನ ಇಳುವರಿ ಮತ್ತು ರಾಸುವಿನ ನಿರ್ವಹಣೆ ಆಧಾರದ ಮೇಲೆ ರಾಸುವಿನ ಮೌಲ್ಯ ನಿರ್ಧರಿಸಿ ನೀಡುವ ದೃಢೀಕರಣ ಆಧರಿಸಿ ವಿಮೆ ಮೊತ್ತ ನಿರ್ಧರಿಸಲಾಗುತ್ತದೆ. ಈ ಬಗ್ಗೆ ಯಾವುದೇ ಗೊಂದಲ ಬೇಡವೆಂದರು.

ಸಂದ ಅಧ್ಯಕ್ಷೆ ಸುನಂದಮ್ಮ ಸಿದ್ದಪ್ಪ, ನಿರ್ದೇಶಕರಾದ ಜಯಮ್ಮ, ದಿವ್ಯಾ, ಗಾಯಿತ್ರಮ್ಮ, ಸಿದ್ದಗಂಗಮ್ಮ, ವೈದ್ಯ ಡಾ.ದೀಕ್ಷಿತ್, ವಿಸ್ತರಣಾಧಿಕಾರಿ ಶಂಕರ್ ನಾಗ್, ಮಹಾಲಕ್ಷ್ಮಿ, ಶಿಲ್ಪಶ್ರೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net