

ಆನೇಕಲ್ : ಕನ್ನಡದ ಬಗ್ಗೆ ಕಮಲ್ ಹಾಸನ್ ಅವಿವೇಕಿತನದ ಹೇಳಿಕೆ ನೀಡಿದ್ದು, ಅಪ್ರಭುದ್ಧ ಮಾತು ಸಹಿಸಲು ಸಾಧ್ಯವಿಲ್ಲ ಎಂದು ಕನ್ನಡ ಜಾಗೃತಿ ವೇದಿಕೆ ಅಧ್ಯ ಮಂಜುನಾಥ್ ದೇವ ಕಿಡಿ ಕಾರಿದರು.
ಕಮಲ್ ಹಾಸನ್ ಹೇಳಿಕೆ ಖಂಡಿಸಿ ಅತ್ತಿಬಲೆಯಲ್ಲಿ ಸೋಮವಾರ ಕನ್ನಡ ಜಾಗೃತಿ ವೇದಿಕೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ವಿರೋಧಿಸಿ ಮಾತನಾಡಿ, ಕ್ರಿಸ್ತ ಪೂರ್ವದಲ್ಲೇ ಕನ್ನಡ ಉದಯವಾಯಿತು ಎನ್ನುವ ಉಲ್ಲೆಖವಿದ್ದು, ಕನ್ನಡ ಭಾಷೆಯ ಇತಿಹಾಸದ ಬಗ್ಗೆ ತಮಿಳು ಭಾಷಾ ಸಂಶೋಧಕ ಮಹಾದೇವನ್ ಅವರು ಸಹ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಭಾಷೆಯ ಇತಿಹಾಸ ಗೊತ್ತಿಲ್ಲದೆ ನಟ ಕಮಲ್ ಹಾಸನ್ ಮಾತನಾಡಿದ್ದಾರೆ. ಮಾತಿನ ತಪ್ಪನ್ನು ತಿದ್ದಿಕೊಂಡು ಕ್ಷಮೆಯಾಚಿಸದಿದ್ದರೆ ಥಗ್ ಚಿತ್ರ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ. ಅಲ್ಲದೇ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಪರಿಣಾಮವನ್ನು ಕಮಲ್ಹಾಸನ್ ಎದುರಿಸಬೇಕಾಗುತ್ತದೆ ಎಂದು ಮಂಜುನಾಥ್ ಎಚ್ಚರಿಕೆ ನೀಡಿದರು.
ಕನ್ನಡಿಗರ ಭಾವನೆ ಹಾಗೂ ಭಾಷೆಯ ಬಗ್ಗೆ ಕೆಣಕಿದರೇ ಸುಮ್ಮನಿರಲು ಸಾಧ್ಯವಿಲ್ಲ. ಕನ್ನಡದ ನಟ&ನಟಿಯರು ಕಮಲ್ ಹಾಸನ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ, ಪ್ರತಿಭಟಿಸಬೇಕು ಕಮಲ್ಹಾಸನ್ಗೆ ತಪ್ಪಿನ ಅರಿವು ಮೂಡಿಸಬೇಕು ಎಂದು ಆಗ್ರಹಿಸಿದರು. ಅತ್ತಿಬೆಲೆ ಸರ್ಕಲ್ನಿಂದ ತಮಿಳುನಾಡಿನ ಗಡಿವರೆಗೆ ಕನ್ನಡಪರ ಹೋರಾಟಗಾರರು ಮೆರವಣಿಗೆ ಮೂಲಕ ಸಾಗಿ, ಕಮಲ್ ಹಾಸನ್ ಭಾವಚಿತ್ರ ಹರಿದು ಪ್ರತಿಭಟನೆ ನಡೆಸಿದರು. ಈ ವೇಳೆ ಭಾವಚಿತ್ರಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾದಾಗ ಪೊಲೀಸರು ತಡೆದರು. ಯುವ ಟಕ ಅಧ್ಯಕ್ಷ ಎಸ್.ಕೆ.ಗೌರೀಶ್, ರಾಜ್ಯ ಸಂಟನಾ ಕಾರ್ಯದರ್ಶಿಗಳಾದ ಗುಡ್ಡಹಟ್ಟಿ ರಾಮಸ್ವಾಮಿ, ಬಳಗಾರನಹಳ್ಳಿ ಕುಮಾರ್, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಕೆ.ನಾಗರಾಜ, ಯುವಟಕ ಜಿಲ್ಲಾಧ್ಯಕ್ಷ ಆರ್.ಮದುಕುಮಾರ್, ಪದಾಧಿಕಾರಿಗಳಾದ ಆರ್.ಸತೀಶ್ರಾಜ್, ರಮೇಶ್ಗೌಡ, ಶಶಿಕುಮಾರ್, ಗುಡ್ಡಹಟ್ಟಿ ಮಂಜುನಾಥ್, ಇಚ್ಚಂಗೂರು ರವಿ, ಗುಡ್ಡಹಟ್ಟಿ ಶ್ರೀನಿವಾಸ್, ಮೈಲಸಂದ್ರ ಸಂಪಂಗಿ ಇದ್ದರು.