ಅವಮಾನಕಾರಿ ಪೋಸ್ಟ್- ಒಬ್ಬನ ಬಂಧನ

arrest
Published on

ದಾಂಡೇಲಿ: ಕೋಮು ಸೌಹಾರ್ದ ಕದಡುವ ಉದ್ದೇಶದಿಂದ ರಾಷ್ಟ್ರ ನಾಯಕರನ್ನು ನಾಯಿಯಂತೆ ಬಿಂಬಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡವನನ್ನು ಪೊಲೀಸರು ಶನಿವಾರ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಹಣ್ಣು ವ್ಯಾಪಾರಿ ಅನೀಸ್ ಹೂಲಗಾರ ಬಂಧಿತ ಆರೋಪಿ. ಫೇಸ್‌ಬುಕ್ ಖಾತೆಯಲ್ಲಿ ಎರಡು ಕೋಮುಗಳ ಮಧ್ಯೆ ದ್ವೇಷ ಹುಟ್ಟಿಸುವ ಹಾಗೂ ಹಿಂದು ಸಮುದಾಯದವರನ್ನು ಪ್ರಚೋದಿಸಿ ಸಾರ್ವಜನಿಕರ ಶಾಂತಿ ಕದಡುವ ಉದ್ದೇಶದಿಂದ ಖೇದಾರಿ ಖಾನ್‌ಎಂಬ ಹೆಸರಿನ ಫೇಸಬುಕ್ ಖಾತೆಯಲ್ಲಿ ಅವಹೇಳನಕಾರಿ ಚಿತ್ರವನ್ನು ಶೇರ್ ಮಾಡಿದ್ದ. ಸಮುದಾಯವೊಂದರಲ್ಲಿ ದ್ವೇಷ, ವೈಷಮ್ಯ ಬೆಳೆಯುವಂತೆ ಮಾಡಲು ಪ್ರಚೋದಿಸುತ್ತಿದ್ದಾನೆ ಎಂದು ಗುಪ್ತಚರ ಮಾಹಿತಿ ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪಿಎಸ್‌ಐ ಅಮೀನ ಸಾಬ ಅತ್ತಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net