ಮಹಾತ್ಮ ಗಾಂಧಿ ಅವಹೇಳನ, ಬಂಧನ

hutagi
Published on

ಹುಬಳ್ಳಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿಯಂದೇ ಅವರ ಕುರಿತು ಇನ್​ಸ್ಟಾಗ್ರಾಮ್ಲ್ಲಿ ಅವಹೇಳನಕಾರಿ ವಿಡಿಯೋ ಸಂದೇಶ ಹರಿಬಿಟ್ಟ ವ್ಯಕ್ತಿಯನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಳೇ ಹುಬ್ಬಳ್ಳಿ ಆಯೋಧ್ಯ ನಗರದ ಸಂದೇಶ ಹುಟಗಿ ಎಂಬಾತ ಬಂಧಿತ ಆರೋಪಿ. ಗಾಂಡು ಗಾಂಧಿ ಎಂಬ ಹೆಸರಿನಲ್ಲಿ ವಿಡಿಯೋ ಹರಿಬಿಟ್ಟಿದ್ದ. ಆತ ಯಾವ ಭಗವದ್ಗೀತೆ ಓದಿದ್ದಾನೆ? ಆತ ಓದಿರುವುದು ಕುರಾನ್, ಬೈಬಲ್. ನಾಲ್ಕು ಬಾರಿ ಹೊಡೆದರೆ ಮತ್ತೊಮ್ಮೆ ಕೆನ್ನೆ ನೀಡಿ ಎಂಬಂತಹ ಅನೇಕ ಹೇಳಿಕೆಗಳ ಮೂಲಕ ಸಾರ್ವಜನಿಕರಲ್ಲಿ ತಪ್ಪು ಸಂದೇಶ ರವಾನಿಸಿದ್ದಾನೆ. ಅವನು, ಇವನು ಎಂದು ಏಕವಚನದಲ್ಲಿ ಸಂಬೋಧಿಸಿದ್ದಾನೆ. ಈತನ ವಿರುದ್ಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಡಿಯೋ ಸಂದೇಶದಲ್ಲಿ ಗಾಂಧೀಜಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಸಂದೇಶ ಹುಟಗಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಹು-ಧಾ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅರ್ಜುನ ಪಾಟೀಲ ಹಾಗೂ ಪದಾಧಿಕಾರಿಗಳು ಹಳೇ ಹುಬ್ಬಳ್ಳಿ ಠಾಣೆ ಪಿಐಗೆ ಮನವಿ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net