ನಗರ ಸಭಾಧ್ಯಕ್ಷರಿಗೆ ಅವಮಾನ; ಕೊಡವಾಮೆರ ಕೊಂಡಾಟ ಸಂಘಟನೆ ಖಂಡನೆ

kodavamera kondata logo - Copy
Published on

ಮಡಿಕೇರಿ: ಮಡಿಕೇರಿ ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯರವರ ಹೆಸರನ್ನು ಬೀಡಾಡಿ ದನವೊಂದರ ಮೇಲೆ ಬರೆದು ಅವಮಾನ ಮಾಡಿರುವುದನ್ನು ಕೊಡವಾಮೆರ ಕೊಂಡಾಟ ಸಂಘಟನೆ ತೀವ್ರವಾಗಿ ಖಂಡಿಸಿದೆ.


ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಒಬ್ಬ ಕೊಡವತಿಯ ಮೇಲೆ ವಿಕೃತಿ ಮೆರೆಯುವುದನ್ನು ನಾವು ಸಹಿಸುವುದಿಲ್ಲ. ನಾವು ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ಪರವಾಗಿಲ್ಲ. ಆದರೆ ಒಬ್ಬ ಕೊಡವತಿ ಮತ್ತು ಮಡಿಕೇರಿ ನಗರದ ಪ್ರಥಮ ಪ್ರಜೆಗೆ ಮಾಡಿರುವ ಅವಮಾನ ಸಹಿಸಲಸಾಧ್ಯ. ಈಗಾಗಲೇ ಪೊಲೀಸ್ ದೂರು ದಾಖಲಿಸಲಾಗಿದ್ದು, ಪೊಲೀಸ್ ಇಲಾಖೆ ತಕ್ಷಣ ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.


ಸಂಘಟನೆಯು ಅನಿತ ಪೂವಯ್ಯರವರ ಜತೆಗಿದ್ದು, ಮುಂದಿನ ಹೋರಾಟಕ್ಕೆ ಸಂಪೂರ್ಣ ಸಹಕಾರ ನೀಡಲಿದೆ. ಮುಂದಿನ ದಿನಗಳಲ್ಲಿ ಕೊಡವ ನಾಯಕರ ಮೇಲೆ ವೈಯುಕ್ತಿಕ ತೇಜೋವಧೆ ಮಾಡುವವರು ಎಚ್ಚರಿಕೆಯಿಂರಿರಬೇಕು ಎಂದು ಎಚ್ಚರಿಸಿದ ಅವರು, ಪೋಲೀಸ್ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಆಗ್ರಹಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net