ದಸರಾ ಉತ್ಸವದಲ್ಲಿ ರೈತರಿಗೆ ಅಪಮಾನ

ಹತ್ತಹಳ್ಳಿ ದೇವರಾಜು
Published on


ತಿ.ನರಸೀಪುರ : ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಆಚರಣೆ ಮಾಡುತ್ತಿರುವುದು ಸಂತೋಷದ ವಿಷಯ ಆದರೆ ರೈತರ ಹೆಸರಿನಲ್ಲಿ ರೈತ ದಸರಾ ಆಚರಣೆ ಮಾಡಿ ಮೈಸೂರು ಜಿಲ್ಲೆಯ ರೈತ ಮುಖಂಡರನ್ನು ಕಡೆಗಣಿಸಿ ರೈತ ದಸರಾ ಆಚರಣೆ ಮಾಡಿರುವುದು ರೈತರಿಗೆ ಮಾಡಿದ ಅಪಮಾನವಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಕೃಷಿ ಇಲಾಖೆ ನಿಷ್ಕ್ರಿಯವಾಗಿದ್ದು, ರಾಜಕಾರಣಿಗಳ ಕಪಿಮುಷ್ಠಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತದೆ. ರಾಜಕೀಯ ಪಕ್ಷಗಳ ಮುಖಂಡರ ಓಲೈಕೆ ಕೆಲಸ ಮಾಡುವ ರೈತ ದಸರಾ ಸರಿಯಲ್ಲ. ಜಿಲ್ಲೆಯಲ್ಲಿ ರಾಷ್ಟ್ರ ಮಟ್ಟದ ರೈತ ಮುಖಂಡ ಹಾಗೂ ರಾಜ್ಯ ಮುಖಂಡರು ಮೈಸೂರು ಜಿಲ್ಲೆಯಲ್ಲಿ ಇರುವುದು ಯಾರಿಗೂ ಕಾಣುತ್ತಿಲ್ಲವೇ? ಎಂದು ಪ್ರಕಟಣೆಯಲ್ಲಿ ಜಿಲ್ಲಾಡಳಿತವನ್ನು ಪ್ರಶ್ನಿಸಿದ್ದಾರೆ.

ದಸರಾ ಹಬ್ಬ ಆಚರಣೆ ಮಾಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರು, ಕೃಷಿ ಸಚಿವರು, ಜಿಲ್ಲಾ ಆಡಳಿತ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ಪಕ್ಷದ ಕಾರ್ಯಕರ್ತರು ಕಾಣುತ್ತಾರೆ. ಆದರೆ ಜಿಲ್ಲೆಯ ರೈತ ಮುಖಂಡರು ಕಾಣುತ್ತಿಲ್ಲ. ರೈತರ ಸಂಕಷ್ಟಗಳಿಗೆ ಸ್ಪಂದಿಸಿ ಹಗಲಿರುಳು ಹೋರಾಟ ಮಾಡುವ ಮೂಲಕ ಸರ್ಕಾರದ ಗಮನ ಸೆಳೆದು ನ್ಯಾಯ ಕೊಡಿಸುವ ರೈತ ಮುಖಂಡರನ್ನು ಕಡೆಗಣಿಸಿದ್ದಾರೆ. ರೈತ ದಸರಾ ಆಚರಣೆ ಮಾಡಿರುವುದು ರೈತರಿಗೆ ಮಾಡಿದ ವಂಚನೆಯಾಗಿದೆ ಎಂದು ಆಡಳಿತ ವರ್ಗದ ನಡೆ ನಿಜಕ್ಕೂ ಖಂಡನಿಯ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net