ಕಾಂಗ್ರೆಸ್‌ನಿಂದಲೇ ಅಂಬೇಡ್ಕರ್‌ಗೆ ಅಪಮಾನ

oppo_0
ಚೆನ್ನಕಲ್ ಕಾವಲ್ ಗ್ರಾಮದಲ್ಲಿ ಸನ್ಮಾನ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿದ ವಿ. ರಾಜೇಂದ್ರ, ಎಸ್.ಮಹದೇವಯ್ಯ, ನಾಗರಾಜ್ ಮಲ್ಲಾಡಿ, ಎಂ.ಪಿ.ರಾಜು, ಚನ್ನಬಸಪ್ಪ ಇದ್ದರು.
Published on

ಬೈಲಕುಪ್ಪೆ: ದೇಶದಲ್ಲಿ ಅತಿ ಹೆಚ್ಚು ಬಾರಿ ಆಡಳಿತ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷದವರಿಂದಲೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನವಾಗಿದೆ ಎಂದು ಬಿಜೆಪಿ ಜಿಲ್ಲಾ ಸಂಚಾಲಕ ಎಸ್.ಮಹದೇವಯ್ಯ ಆರೋಪಿಸಿದರು.

ಪಿರಿಯಾಪಟ್ಟಣ ತಾಲೂಕಿನ ಚನ್ನಕಲ್ ಕವಲ್ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಸಂವಿಧಾನ ಸನ್ಮಾನ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಹೆಚ್ಚು ನೋವು ನೀಡಿದ್ದು ಕಾಂಗ್ರೆಸ್. ಅವರನ್ನು ಚುನಾವಣೆಗೆ ನಿಲ್ಲಿಸಿ ಸೋಲಿಸಿದ್ದು, ಕಾಂಗ್ರೆಸ್‌ನವರೇ ಎಂದು ದೂರಿದರು.

ಜಿಲ್ಲಾ ಸಹ ಸಂಚಾಲಕ ನಾಗರಾಜ್ ಮಲ್ಲಾಡಿ ಮಾತನಾಡಿ, ರಾಷ್ಟ್ರದ ಆಡಳಿತವನ್ನು ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದ ಕಾಂಗ್ರೆಸ್‌ನವರು ಸಂವಿಧಾನ ಮತ್ತು ಅಂಬೇಡ್ಕರ್ ಅವರನ್ನು ಪೂರ್ಣವಾಗಿ ಜನರಿಗೆ ತಿಳಿಸಲೇ ಇಲ್ಲ. ಅಧಿಕಾರದ ದುರಾಸೆಗೆ ತುರ್ತು ಪರಿಸ್ಥಿತಿ ಜಾರಿ ಮಾಡುವಾಗ ಹಾಗೂ ರಾಷ್ಟ್ರಪತಿಗಳ ನೇಮಕ ಸಂಬಂಧ ಸಂವಿಧಾನವನ್ನು ನೂರಾರು ಬಾರಿ ತಿದ್ದುಪಡಿ ಮಾಡಿ ಆಡಳಿತ ವ್ಯವಸ್ಥೆಯನ್ನು ದುರ್ಬಲಗೊಳಿಸಿದ್ದಾರೆ. ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಅಂಬೇಡ್ಕರ್ ಅವರು ವಿಶ್ವದ ಜ್ಞಾನದ ಸಂಕೇತವಾಗಬೇಕು ಎಂಬುದನ್ನು ಅಪೇಕ್ಷಿಸಿದ್ದರಿಂದಲೇ ಇಂದು ವಿಶ್ವಸಂಸ್ಥೆ ಬಾಬಾ ಸಾಹೇಬರ ಜನುಮ ದಿನವನ್ನು ವಿಶ್ವ ಜ್ಞಾನದ ದಿನ ಎಂದು ಘೋಷಿಸಿದೆ ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಬಿಜೆಪಿ ಅಧ್ಯಕ್ಷ ವಿ.ರಾಜೇಂದ್ರ ಮಾತನಾಡಿದರು .ನಿವೃತ್ತ ಶಿಕ್ಷಕ ಸುಬ್ಬಣ್ಣ ಹಾಗೂ ಪತ್ರಕರ್ತ ಕೆ ಶಿವಣ್ಣ ನವರನ್ನು ಸನ್ಮಾನಿಸಲಾಯಿತು. ಮುಖಂಡರು ಸಂವಿಧಾನ ಪ್ರತಿಜ್ಞೆ ಬೋಧಿಸಿದರು. ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ನಳಿನಿ, ಬಿಜೆಪಿ ಮುಖಂಡಗಳಾದ ಚನ್ನಬಸಪ್ಪ, ಎಂ.ಪಿ.ರಾಜು, ವಿಜಯಕುಮಾರ್, ರಮೇಶ್, ಚಂದ್ರನ್, ಪ್ರಭಾ, ಹಲಗಯ್ಯ, ಚಂದ್ರು, ವೀರಾಚಾರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net