ಸರ್ಕಾರಿ ಅಧಿಕಾರಿಗೆ ಅಪಮಾನ -ಖಂಡನೀಯ

NARASHIMHALU
NARASHIMHALU
Published on

ರಾಯಚೂರು ರೈತ ಸಂಘದಿಂದ ಮಾನ್ವಿ ಪಟ್ಟಣದಲ್ಲಿ ನಡೆಸ ಪ್ರತಿಭಟನೆಯಲ್ಲಿ ಹಿರಿಯ ರೈತ ಹೋರಾಟಗಾರ ಚಾಮರಸ ಮಾಲಿಪಾಟೀಲ್ ಜಿಲ್ಲಾ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಕೃಷ್ಣ ಶಾವಂತಗೇರಾ ಇವರನ್ನು ತಳ್ಳಿ ಅವಾಚ್ಯವಾಗಿ ನಿಂದಿಸಿರುವದು ಖಂಡನೀಯವಾಗಿದೆಂದು ದಲಿತ ಸಂಘಟನೆಗಳ ಸಂಚಾಲಕ ನರಸಿಂಹಲು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೋಳ ಖರೀದಿಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ರೈತರ ಮನವಿ ಸ್ವೀಕರಿಸಲು ಹೋದ ಕೃಷ್ಣ ಶಾವಂತಗೇರಾರನ್ನು ತಳ್ಳಿ ಅಸಂಬದ್ದ ಶಬ್ದಗಳಿಂದ ನಿಂದಿಸಿದ್ದಾರೆ. ಅಧಿಕಾರಿಗಳೊಂದಿಗೆ ಗೌರವಯುತವಾಗಿ ನಡೆದು ಕಾನೂನಾತ್ಮಕ ಅವಕಾಶ ಬಳಸಿಕೊಳ್ಳಬೇಕೆ ಹೊರತು ದೌರ್ಜನ್ಯ ಮಾಡಬಾರದು. ಜೋಳ ಖರೀದಿ ಮಾಡುವದು,

ನಿಲ್ಲಿಸುವದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿ. ಅಧಿಕಾರಿಗಳು ಸರ್ಕಾರ ಆದೇಶ ಮಾತ್ರ ಪಾಲಿಸುತ್ತಾರೆ. ಅಧಿಕಾರಿಗಳ ದೌರ್ಜನ್ಯ ಮಾಡುವದನ್ನು ನಿಲ್ಲಿಸಬೇಕೆಂದರು.

ವಕೀಲ ಶಿವುಕುಮಾರ ಮ್ಯಾಗಳಮನಿ ಮಾತನಾಡಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಹಾಗೂ ಆಹಾರ ಇಲಾಖೆ ಉಪನಿರ್ದೇಶಕ ಕೃಷ್ಣ ಶಾವಂತಗೇರಾ ಇವರನ್ನು ತಳ್ಳಿ ಅಪಮಾನಿಸಿದ್ದ ಕ್ಷಮೆಯಾಗಿಸಬೇಕೆಂದು ಆಗ್ರಹಿಸಿದರು. ಇಂತಹ ಪ್ರಯತ್ನಮರುಕಳಿಸಿದಂತೆ ಎಚ್ಚರಿಕೆವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಹೇಮರಾಜ ಅಸ್ಕಿಹಾಳ, ಎಚ್.ಎಂ.ಬಾಬು, ಹನುಮೇಶ ಆರೋಲಿ, ರಘು ಯಾದವ, ನೀಲಕಂಠ, ನರಸಿಂಹಲು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net