

ಉಪ್ಪಿನಂಗಡಿ: ಪ್ರಧಾನಿ ಹಾಗೂ ರಾಜ್ಯದ ಮುಖ್ಯಮಂತ್ರಿ ಅವರನ್ನು ಸಾರ್ವಜನಿಕ ವೇದಿಕೆಗಳಲ್ಲಿ ಸಂಸ್ಕಾರಹೀನತೆಯಿಂದ ಸಂಬೋಧಿಸುವ ಮೂಲಕ ಸಾಮಾಜಿಕ ಅಶಾಂತಿ ಮೂಡಿಸಲು ಕಾರಣರಾಗುತ್ತಿದ್ದಾರೆ ಎಂದು ಆರೋಪಿಸಿ ರೈತ ಸಂಘದ ಮುಂದಾಳು ರವಿಕಿರಣ್ ಪುಣಚ ವಿರುದ್ಧ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಿಸಿದೆ.
ಖಾಸಗಿ ದೃಶ್ಯ ಮಾಧ್ಯಮದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಆರೋಪಿಯು ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಎಂದು ಹೇಳಿಕೊಂಡು ಪ್ರಧಾನಿ ಹಾಗೂ ಮುಖ್ಯಮಂತ್ರಿ ವಿರುದ್ಧ ಏಕವಚನ ಪದ ಬಳಕೆ ಮಾಡಿದ್ದಾರೆ. ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ದೂರು ಸ್ವೀಕರಿಸಿದರು. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಪುತ್ತೂರು ಗ್ರಾಮಂತರ ಮಂಡಲ ಅಧ್ಯಕ್ಷ ಸುನೀಲ್ ದಡ್ಡು, ಮುಂದಾಳುಗಳಾದ ಗಣೇಶ್ ಕುಲಾಲ್, ಪ್ರವೀಣ್ ಪುಣಚ, ಸದಾನಂದ ಕಾರ್ ಕ್ಲಬ್, ರಾಮಚಂದ್ರ ಪೂಜಾರಿ ಮತ್ತಿತರರಿದ್ದರು.