ಪುರುಷ ಶಿಕ್ಷಕರ ಬಳಕೆ ಮಾಡುವಂತೆ ಸೂಚನೆ

Teachers
Published on

ಬೆಂಗಳೂರು: ಕರೊನಾ ಹರಡುವುದನ್ನು ತಡೆ ಗಟ್ಟಲು ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹಂತಗಳಲ್ಲಿ ಶಿಕ್ಷಕರನ್ನು ನಿಯೋಜಿಸುವ ವೇಳೆ ಕಡ್ಡಾಯವಾಗಿ 50 ವರ್ಷದೊಳಗಿನ ಪುರುಷ ಶಿಕ್ಷಕರಿಗೆ ಪ್ರಾಧಾನ್ಯತೆ ನೀಡಬೇಕು.

ಅನಿವಾರ್ಯ ಸಂದರ್ಭ ಹೊರತುಪಡಿಸಿ ಸಾಧ್ಯವಾದಷ್ಟು ಮಟ್ಟಿಗೆ ಶಿಕ್ಷಕಿಯರಿಗೆ ವಿನಾಯಿತಿ ನೀಡುವಂತೆ ಆಯುಕ್ತರಿಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ. ಬಿಬಿಎಂಪಿಯು ರಚಿಸುತ್ತಿರುವ ಕರೊನಾ ಜಾಗೃತಿ ತಂಡಗಳಲ್ಲಿ ಶಿಕ್ಷಕರನ್ನು ಬಳಕೆ ಮಾಡಿಕೊಳ್ಳುತ್ತಿರುವುದರ ಬಗ್ಗೆ ವಿರೋಧ ವ್ಯಕ್ತವಾಗಿತ್ತು.

ದೇಶವನ್ನು ಕಾಡುತ್ತಿರುವ ಕರೊನಾ ಮಹಾಮಾರಿಯಿಂದ ಜನರನ್ನು ರಕ್ಷಿಸುವ ಕಾರ್ಯದಲ್ಲಿ ಕರ್ನಾಟಕದ ಖಾಸಗಿ ಕಾರ್ಖಾನೆ ಜತೆಗೆ ಐಐಟಿ ಕೂಡ ಸದ್ದಿಲ್ಲದೆ ಕಾರ್ಯ ನಿರ್ವಹಿಸುತ್ತಿದೆ. ಕರೊನಾ ನಿಯಂತ್ರಿಸಬಲ್ಲ ‘ವೈಯಕ್ತಿಕ ಸುರಕ್ಷಾ ಸಾಧನ’ಕ್ಕೆ (ಪಿಪಿಎ ಕಿಟ್) ಭಟ್ಕಳದ ಕಾರ್ಖಾನೆ ರೂಪ ನೀಡುತ್ತಿದ್ದರೆ, ವೈದ್ಯರ ಆರೋಗ್ಯ ಸುರಕ್ಷತೆಗೆ ಅಗತ್ಯವಾದ ಮುಖಕವಚಗಳಿಗೆ ಧಾರವಾಡದ ಐಐಟಿ ಸ್ಪರ್ಶ ಕೊಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net