ಕಾಲಮಿತಿಯೊಳಗೆ ಜಿಲ್ಲಾ ಮುಖ್ಯರಸ್ತೆ ಕಾಮಗಾರಿ ಪೂರ್ಣಗೊಳಿಸಲು ತಾಕೀತು

Srt magadi roda
Published on

ಶಿರಹಟ್ಟಿ: ಅಭಿವೃದ್ಧಿ ಕಾಮಗಾರಿಗಳನ್ನು ಗುಣಮಟ್ಟದಿಂದ ಕೈಗೊಳ್ಳುವುದಲ್ಲದೆ, ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಗುತ್ತಿಗೆದಾರರಿಗೆ ತಾಕೀತು ಮಾಡಿದರು.

ಶಿರಹಟ್ಟಿ- ಮಾಗಡಿ ವ್ಯಾಪ್ತಿಯ ಜಿಲ್ಲಾ ಮುಖ್ಯರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿ, ಪ್ರತಿಯೊಂದು ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ರಾಜಕೀಯ ಕೇವಲ ಚುನಾವಣೆ ಸಮಯದಲ್ಲಿ ಮಾತ್ರ. ಅಭಿವೃದ್ಧಿ ಮಾಡುತ್ತಿರುವುದು ಜನರ ಉದ್ಧಾರಕ್ಕಾಗಿ ಎಂದು ಶಾಸಕರು ಸ್ಪಷ್ಟಪಡಿಸಿದರು.

ಟಿಪ್ಪರ್ ಮಾಲೀಕರು ಸರ್ಕಾರದ ನಿಯಮ ಉಲ್ಲಂಘಿಸಿ ರಾಯಲ್ಟಿ, ತೆರಿಗೆ ಪಾವತಿಸದೆ 14 ಟನ್ ಬದಲಿಗೆ 38 ಟನ್ ಕಲ್ಲು ಮತ್ತು ಮರಳು ಸಾಗಣೆ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದರಿಂದ ಕೆಲವೇ ತಿಂಗಳಲ್ಲಿ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು ಬಿದ್ದು ಗುಣಮಟ್ಟದ ರಸ್ತೆಗಳು ಹಾಳಾಗುತ್ತಿವೆ. ಇನ್ಮುಂದೆ ಮೋಸದಾಟ ನಡೆಸಬಾರದು. ಕ್ರಷರ್ ಮಾಲೀಕರು ಕಲ್ಲು ಮತ್ತು ಎಂ. ಸ್ಯಾಂಡ್ ಹೇರುವಾಗ ವೇಬ್ರಿಡ್ಜ್ ಪಾವತಿ ತಪ್ಪದೆ ನೀಡಬೇಕು. ನಿರ್ಲಕ್ಷ್ಯ ತೋರಿದರೆ ಅವರನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಫಕೀರೇಶ ರಟ್ಟಿಹಳ್ಳಿ, ಬಸವರಾಜ ಪಲ್ಲೇದ, ಜಾನು ಲಮಾಣಿ, ಸಂದೀಪ ಕಪತ್ತನವರ, ಬಸವರಾಜ ಹಲಸೂರ, ಸುರೇಶ ಅಕ್ಕಿ, ಬಿಜೆಪಿ ಮಹಿಳಾ ತಾಲೂಕಾಧ್ಯಕ್ಷೆ ನಂದಾ ಪಲ್ಲೇದ, ಮಹಾದೇವ ಗಾಣಗೇರ, ರಾಜೀವರೆಡ್ಡಿ ಬಮ್ಮನಕಟ್ಟಿ, ಪ್ರವೀಣಗೌಡ ಪಾಟೀಲ, ಪರಶುರಾಮ ಡೊಂಕಬಳ್ಳಿ, ಶರಣು ಹೊಸೂರ, ರಮೇಶ ಕಲ್ಲಪ್ಪನವರ, ರಾಜು ಕಪ್ಪತ್ತನವರ, ರಾಮಣ್ಣ ಕಂಬಳಿ, ಮಂಜುನಾಥ ಸೊಂಟನೂರ, ಉಮೇಶ ಅಕ್ಕಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net