ನೀರು, ದೀಪದ ವ್ಯವಸ್ಥೆಗೆ ಸೂಚನೆ

instructions to arrange water, light facility
Published on

ಮುಂಡರಗಿ: ಪುರಸಭೆಗೆ ಆಶ್ರಯ ಮನೆ ಕೋರಿ ಅರ್ಜಿ ಹಾಕಿರುವವರಿಗೆ ಆಶ್ರಯ ಮನೆ ನೀಡಬೇಕು. 30 ಕುಟುಂಬಗಳು ಇರುವಂತಹ ಭಾಗದಲ್ಲಿ ನೀರು, ದೀಪದ ವ್ಯವಸ್ಥೆ ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಸೂಚಿಸಿದರು.

ಪಟ್ಟಣದ ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯದ ಕುಂಚಿ ಕೊರವ ಸಮಾಜದ ಕುಟುಂಬಗಳ ಕಾಲನಿಗೆ ಭಾನುವಾರ ಭೇಟಿ ನೀಡಿ, ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಅಲ್ಲಿನ ನಿವಾಸಿಗಳ ಅಹವಾಲು ಆಲಿಸಿದರು.

ರಾಜ್ಯ ಕೊರಮರ ಸಮುದಾಯ ಒಕ್ಕೂಟದ ಅಧ್ಯಕ್ಷ ಶಿವಾನಂದ ಭಜಂತ್ರಿ, ನಮ್ಮ ಸಮುದಾಯವರು ತೀರ ಹೀನಾಯ ಪರಿಸ್ಥಿತಿಯಲ್ಲಿದ್ದಾರೆ. ಶಿಕ್ಷಣ ಇಲ್ಲದಾಗಿದ್ದು, ಹಾದಿಬೀದಿ ಭಾಗದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕುಂಚಿ, ಕೊರವ, ಕೊರಮ ಎಲ್ಲ ಮೂಲ ಒಂದೇ ಆಗಿದೆ. ಎಸ್ಸಿ ಜಾತಿ ಪ್ರಮಾಣ ಪತ್ರ ದೊರೆಯಲು ಕೊರವರು ಎಂದು ನಮೂದಿಸಬೇಕು ಎಂದು ಕೋರಿದರು.

ಪುರಸಭೆ ಸದಸ್ಯ ರೈಮಾನಸಾಬ್ ಮಲ್ಲನಕೇರಿ, ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಮಹೇಶ ಪೋತದಾರ ಮಾತನಾಡಿದರು. ಮೇವುಂಡಿ ಗ್ರಾಮದಲ್ಲಿ ಬುಡ್ಗ ಜಂಗಮ ಅಲೆಮಾರಿ ಸಮಾಜದವರೊಂದಿಗೆ ಹಾಗೂ ಕೊರ್ಲಹಳ್ಳಿಯ ಶೀಳ್ಳಿಕ್ಯಾತರ ಅಲೆಮಾರಿ ಸಮಾಜದವರೊಂದಿಗೆ ಕುಂದು ಕೊರತೆ ಸಭೆ ನಡೆಸಿದರು.

ತಹಸೀಲ್ದಾರ್ ಎರ‌್ರಿಸ್ವಾಮಿ ಪಿ.ಎಸ್., ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಆನಂದ ಏಕಲವ್ಯ, ಅರುಣಾ ಸೊರಗಾವಿ, ಮಂಜುನಾಥ ಕುಸಗಲ್ಲ, ನಾಗರಾಜ ಹೊಂಬಳಗಟ್ಟಿ, ರಾಮು ಭಜಂತ್ರಿ, ರುದ್ರೇಶ ಭಜಂತ್ರಿ, ಹುಲಿಗೇಶ ಭಜಂತ್ರಿ, ಮಾರುತಿ ಭಜಂತ್ರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net