ಗುಣಮಟ್ಟದ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚನೆ

h13-tenginakai
Published on

ಹುಬ್ಬಳ್ಳಿ: ಇಲ್ಲಿಯ ವಾರ್ಡ್ ನಂ. 44ರ ಹೊಸ ಬಾದಾಮಿ ನಗರದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜಾ ಕಾರ್ಯಕ್ರಮ ಬುಧವಾರ ನಡೆಯಿತು.
ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಗುಣಮಟ್ಟದ ಕಾಮಗಾರಿ ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ರಸ್ತೆಯಿಂದ ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗಲಿದೆ ಎಂದರು.
ಪಾಲಿಕೆ ಸದಸ್ಯೆ ಉಮಾ ಮುಕುಂದ, ಪ್ರಮುಖರಾದ ವಿ. ಮುಕುಂದ, ಶಿವು ಮಡಿವಾಳ, ವಿನೋದ ರೇವಣಕರ, ವಿನೋದಕುಮಾರ ಪಟ್ವಾ, ಶ್ರೀಧರ ಪೆಡ್ರಿಪಾಡ, ನಿಖಿಲ್ ವಾಂಗಿ, ಮನೋಜ ಅಬ್ಬು, ಮೇಘಾ, ಶ್ರೀನಿವಾಸ ಕತ್ತಿಮಣಿ, ವಿಜಯ ಪೂಜಾರ, ಡಾ. ರಮೇಶ ಬಾಬು, ಶ್ರೀಧರ ಗುಪ್ತ, ಧಮೇರ್ಂದ್ರ ರಾಮಚಂದ್ರಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net