ಆಯುಧ ಒಪ್ಪಿಸಲು ಸೂಚನೆ

download
Published on

ಧಾರವಾಡ: ಲೋಕಸಭಾ ಚುನಾವಣೆ ಆಯುಧ ಲೈಸನ್ಸ್ದಾರರು ಆಯುಧಗಳನ್ನು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಒಪ್ಪಿಸಬೇಕು ಎಂದು ಹುಬ್ಬಳ್ಳಿ- ಧಾರವಾಡ ಮಹಾನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಆದೇಶಿಸಿದ್ದಾರೆ. ಪ್ರಕಟಣೆ ನೀಡಿರುವ ಅವರು, ಚುನಾವಣಾ ನೀತಿ ಸಂಹಿತೆ ಪೂರ್ಣಗೊಳ್ಳುವವರೆಗೆ ನಗರ ವ್ಯಾಪ್ತಿಯಲ್ಲಿ ಪರವಾನಗಿ ಹೊಂದಿರುವ ಆಯುಧ ಲೈಸೆನ್ಸ್ದಾರರು ಆಯುಧ ಸಾಗಣೆ, ಪ್ರದರ್ಶನವನ್ನು ನಿಷೇಸಲಾಗಿದೆ. ಆಯುಧಗಳನ್ನು ಠಾಣೆಗೆ ಒಪ್ಪಿಸಲು ವಿಫಲರಾದವರ ವಿರುದ್ಧ ಭಾರತೀಯ ದಂಡ ಸಂಹಿತೆ ಪ್ರಕ್ರಿಯೆ ಅಡಿ ಕಾನೂನು ಕ್ರಮ ಜರುಗಿಸಲಾಗುವುದು. ಸರ್ಕಾರಿ ಅಽಕಾರಿ, ಸಿಬ್ಬಂದಿ ಮತ್ತು ಬ್ಯಾಂಕ್, ಇತರ ಖಾಸಗಿ ಹಣಕಾಸು ಸಂಸ್ಥೆಗಳು, ರಾಷ್ಟಿçÃಕೃತ ಮತ್ತು ಸಹಕಾರಿ ಬ್ಯಾಂಕ್‌ಗಳಿಗೆ ಇದು ಅನ್ವಯಿಸುವುದಿಲ್ಲ. ಆದೇಶದಿಂದ ವಿನಾಯತಿ ಪಡೆಯಲು ಇಚ್ಛಿಸುವವರು ಸೂಕ್ತ ಕಾರಣದೊಂದಿಗೆ ಮಾ. ೨೨ರೊಳಗೆ ಸದಸ್ಯ ಕಾರ್ಯದರ್ಶಿಗಳು, ಶಸ್ತಾçಸ್ತç್ರ, ಸ್ಕಿçÃನಿಂಗ್ ಸಮಿತಿಗೆ ಅರ್ಜಿ ಸಲ್ಲಿಸಬೇಕು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net