

ಬೆಳಗಾವಿ: ಕಳೆದ 10 ವರ್ಷಗಳಿಂದ ಯಾವುದೇ ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗದ 36 ಜನರನ್ನು ರೌಡಿಶೀಟರ್ ಪಟ್ಟಿಯಲ್ಲಿ ತೆಗೆದುಹಾಕಲು ಸೂಚಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ಹೇಳಿದರು.
ಯುಗಾದಿ ಹಾಗೂ ಈದ್–ಉಲ್–ಫಿತ್ರ್ ಪ್ರಯುಕ್ತ, ನಗರದಲ್ಲಿ ಶನಿವಾರ ನಡೆದ ರೌಡಿಶೀಟರ್ ಪರೇಡ್ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗದಂತೆ 200 ಮಂದಿ ರೌಡಿಶೀಟರ್‌ಗಳಿಗೆ ಬುದ್ಧಿವಾದ ಹೇಳಲಾಗಿದೆ’ ಎಂದರು.
‘ಬೆಳಗಾವಿಯ ನೆಹರೂ ನಗರದ ಪಿ.ಜಿಯಲ್ಲಿ ಈಚೆಗೆ ಯುವತಿ ಐಶ್ವರ್ಯಲಕ್ಷ್ಮಿ ಗಲಗಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ, ಪ್ರಿಯಕರ ಮತ್ತು ಆತನ ಗೆಳೆಯನನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.