ಮತದಾರರಿಗೆ ಪ್ರತಿಜ್ಞಾ ವಿಧಿ ಬೋಧನೆ

Instruction of Pledge of Allegiance to Voters
Instruction of Pledge of Allegiance to Voters
Published on

ಇಳಕಲ್ಲ (ಗ್ರಾ) : ಇಲ್ಲಿನ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಶನಿವಾರ ಆಚರಿಸಲಾಯಿತು.

ಎಂ.ಎನ್. ಗೌಡರ, ಪಿ.ಆರ್. ಪಾಟೀಲ, ಆರ್.ವಿ. ಶ್ಯಾವಿ, ಎ.ಎಸ್. ಕೂಡ್ಲೆಪ್ಪನವರ, ಎಸ್.ಟಿ. ಕತ್ತಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ರಾಜಕೀಯವಾಗಿ ತಮ್ಮ ಪರಮಾಧಿಕಾರವನ್ನು ಮತದಾನದ ಮೂಲಕ ಚಲಾಯಿಸುವ ಹಕ್ಕಿದೆ ಎಂದರು.

ಮತದಾನದ ಮೂಲಕ ತಮಗೆ ಬೇಕಾದ ಸರ್ಕಾರವನ್ನು ರಚಿಸಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅದಕ್ಕಾಗಿ ಭಾರತ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೂ ಯಾವುದೇ ತಾರತಮ್ಯ ಮಾಡದೆ ಮತದಾನ ಮಾಡಲು ಸಂವಿಧಾನ ಬದ್ಧವಾಗಿ ಅವಕಾಶ ನೀಡಲಾಗಿದೆ. ಪ್ರಜೆಗಳು ನಿಷ್ಪಕ್ಷಪಾತವಾಗಿ, ನಿರ್ಭೀತಿಯಿಂದ, ಕಡ್ಡಾಯವಾಗಿ ಮತ ಚಲಾವಣೆ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯ ಬಸವರಾಜ ಸುಗ್ಗಮದ ವಿದ್ಯಾರ್ಥಿಗಳಿಗೆ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net