ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಬಿತ್ತಿ

arkera sslc
ಅರಕೇರಾದ ಸರ್ಕಾರಿ ಮೌಲಾನ್ ಆಜಾದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ಕೆ.ಅನಂತರಾಜ ನಾಯಕ, ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ, ಪ್ರಮುಖರಾದ ತಿಮ್ಮಪ್ಪ ನಾಯಕ, ರಾಕೇಶ ಪೊಲೀಸ್ ಪಾಟೀಲ್, ರವಿ ನಾಯಕ ಇತರರಿದ್ದರು.
Published on

ಅರಕೇರಾ: ವಿದ್ಯಾರ್ಥಿ ಜೀವನ ಅತ್ಯಂತ ಲವಲವಿಕೆಯಿಂದ ಕೂಡಿರುತ್ತದೆ ಎಂದು ನಿವೃತ್ತ ಬ್ಯಾಂಕ್ ಅಧಿಕಾರಿ ಕೆ.ಅನಂತರಾಜ ನಾಯಕ ಹೇಳಿದರು.

ಪಟ್ಟಣದ ಸರ್ಕಾರಿ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಶನಿವಾರ ಮಾತನಾಡಿದರು. ವಿದ್ಯಾರ್ಥಿಗಳ ಮನಸ್ಸು ಬಹಳ ಶುದ್ಧವಾಗಿರುತ್ತದೆ. ಏನನ್ನು ಬಿತ್ತುತ್ತೇವೆಯೋ ಅದುವೇ ಫಲವಾಗಿ ಬರುತ್ತದೆ. ಅದಕ್ಕಾಗಿ ಗುಣಾತ್ಮಕ ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತಬೇಕು ಎಂದರು.

ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪ್ರಮುಖ ಘಟ್ಟ. ಪರೀಕ್ಷೆ ಹತ್ತಿರ ಬರುತ್ತಿವೆ. ಉತ್ತಮ ಅಂಕ ಗಳಿಸಲು ಕಠಿಣ ಪರಿಶ್ರಮ ಅಗತ್ಯ ಎಂದರು.

ಪ್ರಮುಖರಾದ ತಿಮ್ಮಪ್ಪ ನಾಯಕ, ರಾಕೇಶ ಪೊಲೀಸ್ ಪಾಟೀಲ್, ರವಿ ನಾಯಕ, ಜಾವೀದ್ ಚಿಂಚೋಳಿಕರ್, ಮಹಾಂತೇಶ ಪೂಜಾರಿ, ವೆಂಕೋಬ ನಾಯಕ, ದಾವೂದ್, ಸೈದು ಸಾಹೇಬ್, ನೂರ್ ಅಹ್ಮದ್, ಬಾಷಾ ಸಾಬ್, ಚಾಂದ್ ಪಾಷಾ, ಖಾಜಾ ಹುಸೇನ್, ದಾವೂದ್ ಸಾಬ್, ಸಾಹೇಬ್ ಹುಸೇನ್, ಅನೀಫ್, ರಫಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net