

ವಿಜಯಪುರ: ಪಾಲಕರು ತಮ್ಮ ಮಕ್ಕಳಿಗೆ ಶ್ರಮದ ಮಹತ್ವ, ಹಣದ ಮೌಲ್ಯ ಜತೆಗೆ ಮಾನವೀಯ ಮೌಲ್ಯಗಳನ್ನು ಪರಿಚಯಿಸಬೇಕು. ಅಂದಾಗಲೇ ಮಕ್ಕಳು ಶಿಣದ ಮಹತ್ವ ಅರಿಯುತ್ತಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ$್ಮಣ ನಿಂಬರಗಿ ಹೇಳಿದರು.
ನಗರ ಹೊರವಲಯದ ವೇದ ಅಕಾಡೆಮಿಯ ವೇದ ಭವನದಲ್ಲಿ ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಮಂಗಳವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ನಾವು ಹೇಳುವುದನ್ನು ಕೇಳುವುದಿಲ್ಲ. ಬದಲಾಗಿ ನಾವು ಮಾಡುವುದನ್ನು ಅನುಸರಿಸುತ್ತಾರೆ. ಪಾಲಕರು ಮಕ್ಕಳಿಗೆ ಆದರ್ಶಪ್ರಾಯವಾಗಬೇಕು. ಪ್ರಸ್ತುತ ಸಮಾಜದಲ್ಲಿ ಮಕ್ಕಳಿಗೆ ವಿಪುಲ ಅವಕಾಶಗಳಿದ್ದು, ಅವುಗಳ ಸದ್ಬಳಸಿಕೊಳ್ಳಬೇಕು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪಾಲಕರಷ್ಟೇ ಮಹತ್ವ ಶಿಕರು ಹೊಂದಿದ್ದಾರೆ. ಮಕ್ಕಳಿಗೆ ಸಮಾಜದ ಸವಾಲುಗಳನ್ನು ಎದುರಿಸುವ ಆತ್ಮಬಲ, ಸ್ಥೆರ್ಯ ತುಂಬಿದರೆ ಅವರೂ ಸಾಧನೆಗೈಯುತ್ತಾರೆ. ಗಡಿಕಾಯುವ ಸೈನಿಕ, ಅನ್ನ ನೀಡುವ ರೈತನು ಎಷ್ಟು ಮುಖ್ಯವೋ ದೇಶದ ಶೈಣಿಕ ಬೆಳವಣಿಗೆಗೆ ಶಿಕರ ಪಾತ್ರವೂ ಅಷ್ಟೇ ಮುಖ್ಯ ಎಂದರು.
ಬೆಂಗಳೂರಿನ ಆರ್ವಿ ಕಾಲೇಜಿನ ಪ್ರೊಫೆಸರ್ ಡಾ. ಆನಂದ ಜತ್ತಿ ಮಾತನಾಡಿ, ಮಕ್ಕಳ ಆರೋಗ್ಯ ಕಲಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವೇದ ಅಕಾಡೆಮಿಯಲ್ಲಿ ಉತ್ತಮ ಆಹಾರ ಪದ್ಧತಿ, ವಸತಿ, ಪರಿಸರ ಹಾಗೂ ಶಿಕರಿಂದ ನನ್ನ ಮಗ ಸಾಧನೆಗೈಯಲು ಸಾಧ್ಯವಾಗಿದೆ. ಶಾಲೆಯಲ್ಲಿನ ಭೌತಿಕ ಸೌಲಭ್ಯಗಳಿಗಿಂತ ಗುಣಮಟ್ಟದ ಶಿಕ್ಷಣವೂ ಇಲ್ಲಿದೆ ಎಂದರು.
ಸಂಸ್ಥೆಯ ಸಲಹಾ ಸಮಿತಿ ಸದಸ್ಯ ನಿವೃತ ಪೊಲೀಸ್ ಅಧಿಕಾರಿ ಬಿ.ಆರ್. ಚೌಕಿಮಠ ಮಾತನಾಡಿ, ಮಕ್ಕಳು ಕಡಿಮೆ ಅಂಕ ಪಡೆದಾಗ ಅವರಿಗೆ ತೆಗಳುವುದು ತಪ್ಪು. ಅವರನ್ನು ಮಾನಸಿಕವಾಗಿ ಸದೃಢ ಮಾಡುವ ಕೆಲಸವಾಗಬೇಕು. ವೇದ ಸಂಸ್ಥೆಯು ಕೆಜಿಯಿಂದ ಪಿಜಿ ವರಗೆ ಗುಣಮಟ್ಟದ ಶಿಣ ನೀಡುವ ನಿಟ್ಟಿನಲ್ಲಿ ಶ್ರಮವಹಿಸುತ್ತಿದೆ ಎಂದು ಹೇಳಿದರು.
ಸಂಸ್ಥೆಯ ಉಪಾಧ್ಯ ದಯಾನಂದ ಕೆಲೂರ ಮಾತನಾಡಿ, ನಮ್ಮ ಸಂಸ್ಥೆಯ 111 ವಿದ್ಯಾರ್ಥಿಗಳು&ಸೈನಿಕ ಶಾಲಾ ಪ್ರವೇಶ ಪರೀಕ್ಷೆಯಲ್ಲಿ 200ಕ್ಕಿಂತ ಹೆಚ್ಚು ಅಂಕ ಪಡೆದು ಅಮೋ ಸಾಧನೆಗೈದಿದ್ದಾರೆ. ಅಲ್ಲದೆ, ರಾಜ್ಯದ ಟಾಪ್ರಲ್ಲಿ 6 ವಿದ್ಯಾರ್ಥಿಗಳು ಸ್ಥಾನಪಡೆದು ಸಂಸ್ಥೆಯ ಕೀತಿ ಹೆಚ್ಚಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯ ಡಾ. ಶಿವಾನಂದ ಕೆಲೂರ ಮಾತನಾಡಿ, ಶ್ರೇಷ್ಠ ಪೊಲೀಸ್ ಅಧಿಕಾರಿಗಳಿಂದ ಸನ್ಮಾನ ಪಡೆದ ಮಕ್ಕಳು, ತಾವು ಕೂಡ ಅತ್ಯುನ್ನತ ಸಾಧನೆಗೈಯಲು ಪಣತೊಡಬೇಕು ಎಂದರು.
ಸಂಸ್ಥೆಯ ಜೀವಾಳ ಶಿಕರು ಈ ಸಾಧನೆಗೆ ಅವರಿಗೂ ಸನ್ಮಾನ ಹಾಗೂ ಅಭಿನಂದನಾಪೂರ್ವಕವಾಗಿ 1 ಲ ಹಣವನ್ನು ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿನಿ ಅನ ಜತ್ತಿಗೆ ಸೈನಿಕ ಶಾಲೆಯ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಹಾಗೂ ದೇಶಕ್ಕೆ 111ನೇ ಸ್ಥಾನ ಪಡೆದ ಹಿನ್ನೆಲೆ 21 ಸಾವಿರ ರೂ. ನಗದು ಬಹುಮಾನ, ಅಪೂರ್ವ ಭಂಡಿ ರಾಜ್ಯ ಬಾಲಕಿಯರ ವಿಭಾಗದಲ್ಲಿ ದ್ವೀತಿಯ ಹಾಗೂ ದೇಶಕ್ಕೆ 376ನೇ ಸ್ಥಾನ ಪಡೆದ ಹಿನ್ನೆಲೆಯಲ್ಲಿ 11 ಸಾವಿರ ರೂ. ಬಹುಮಾನ ಹಾಗೂ ಪ್ರತಿಕ ಬಂಡಗಾರ ರಾಜ್ಯಕ್ಕೆ 6ನೇ ಹಾಗೂ ದೇಶಕ್ಕೆ 353 ಸ್ಥಾನ ಪಡೆದ ಹಿನ್ನೆಲೆಯಲ್ಲಿ 11 ಸಾವಿರ ರೂ. ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಅಲ್ಲದೆ, ಪ್ರಣವ ಝಳಕಿ ಮತ್ತು ಬಶೀರ ಅಹ್ಮದ ಜೀರಗಾಳ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ 9ನೇ ಸ್ಥಾನ ಮತ್ತು ಅಮೀರ್ ಅಹ್ಮದ ರಾಜ್ಯಕ್ಕೆ 10ನೇ ಸ್ಥಾನ ಮತ್ತು ಸಾಧನೆಗೈದ ಉಳಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮುಖ್ಯಶಿಕ್ಷಕ ಸುನೀಲ ಬಿ.ಎಂ, ಮಹಾದೇವಪ್ರಸಾದ ಕುಲಕರ್ಣಿ, ಮುಖ್ಯ ಶಿಕ್ಷಕಿ ರೇಷ್ಮಿ ಕವಟಗಿಮಠ, ಸಾಜೀದ ದರ್ಗಾ ಮತ್ತಿತರರಿದ್ದರು. ಅರ್ಜುನ ಹಡಗಲಿ ಸ್ವಾಗತಿಸಿದರು. ಜ್ಯೋತಿ ಕೊಪ್ಪದ ಹಾಗೂ ಸುನೀತಾ ಕೊಲುರ ನಿರೂಪಿಸಿದರು. ರಾಜಶೇಖರ ಮಂಗಾನವರ ವಂದಿಸಿದರು.
ಫೋಟೋ : ಎಂಎಂ 27&7
ವಿಜಯಪುರದ ವೇದ ಅಕಾಡೆಮಿಯ ವೇದ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಎಸ್ಪಿ ಲಕ್ಷ$್ಮಣ ನಿಂಬರಗಿ, ಡಾ. ಶಿವಾನಂದ ಕೆಲೂರ, ಬಿ.ಆರ್. ಚೌಕಿಮಠ ಮತ್ತಿತರರಿದ್ದಾರೆ.